Advertisement

73 ಕಾಲೇಜುಗಳಲ್ಲಿ ಟೆಲಿ ಶಿಕ್ಷಣ

11:59 PM Jul 31, 2019 | Team Udayavani |

ಬೆಂಗಳೂರು: ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಭಾಷೆಯ ಪ್ರಾವೀಣ್ಯತೆ ನೀಡುವ ಉದ್ದೇಶದಿಂದ 73 ಕಾಲೇಜುಗಳಲ್ಲಿ ಟೆಲಿ ಶಿಕ್ಷಣ ಅನುಷ್ಠಾನಕ್ಕೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಹೈದರಾಬಾದ್‌ ಕರ್ನಾಟಕ ಭಾಗದ 64 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ರಾಜ್ಯದ 73 ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಪ್ರಾವೀಣ್ಯತೆ ಒದಗಿಸಲು ಟೆಲಿ ಶಿಕ್ಷಣವನ್ನು ಜಾರಿ ಮಾಡಲಾಗುತ್ತಿದೆ.

Advertisement

ಟೆಲಿ ಶಿಕ್ಷಣವನ್ನು ಆ.29ರಿಂದಲೇ ಆರಂಭಿಸಲು ಸೂಚಿಸಿ, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ದಿನಕ್ಕೆ ಒಂದು ಗಂಟೆಯಂತೆ 60 ಗಂಟೆಗಳ ತರಗತಿ ಇದಾಗಿದೆ. ಆಧುನಿಕ ಪರಿಕರ ಉಪಯೋಗಿಸಿಕೊಂಡು ಟೆಲಿ ಶಿಕ್ಷಣವನ್ನು ನಿತ್ಯ ಮಧ್ಯಾಹ್ನ 3.30ರಿಂದ 4.30ರವರೆಗೆ ನೀಡಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next