ಹೈದರಾಬಾದ್: ಕಳವು ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿದ್ದ 45ವರ್ಷದ ಮಹಿಳೆಯೊಬ್ಬಳು ಜೈಲಿನಲ್ಲಿಯೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಯಾದಾದ್ರಿಯಲ್ಲಿ ನಡೆದಿದೆ. ಪೊಲೀಸರು ಚಿತ್ರಹಿಂಸೆ ನೀಡಿದ ಪರಿಣಾಮ ಆಕೆ ಸಾವನ್ನಪ್ಪಿರುವುದಾಗಿ ಕುಟುಂಬ ಸದಸ್ಯರು ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಲಬುರಗಿಯ ಜಿಮ್ಸ್ ನಲ್ಲಿ ಅತ್ಯಾಚಾರ ಯತ್ನ ನಡೆಸಿದ್ದ ಆರೋಪಿಯ ಹಳೆಯ ಹೀನ ಕೃತ್ಯ ಬಯಲು
ಅಡ್ಡಗುಡೂರ್ ಪೊಲೀಸ್ ಠಾಣೆಯಲ್ಲಿ ಯೆಸುಮ್ಮಾಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಸಿಬ್ಬಂದಿಗಳು ಆರೋಪಿಸಿರುವುದಾಗಿ ಕುಟುಂಬ ಸದಸ್ಯರು ದೂರಿರುವುದಾಗಿ ಎಎನ್ ಐ ವರದಿ ಮಾಡಿದೆ.
ಆದರೆ ಮಹಿಳೆಯ ಕುಟುಂಬ ಸದಸ್ಯರ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಯಾದಾದ್ರಿ ಡಿಸಿಪಿ ಪ್ರಕಾರ, ಕಳ್ಳತನ ಪ್ರಕರಣವೊಂದರಲ್ಲಿ ಶನಿವಾರ ಯೆಸುಮ್ಮಾ ಮತ್ತು ಆತನ ಮಗನ ಜತೆಗೆ ಅಡ್ಡಗುಡೂರ್ ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಎಂದು ತಿಳಿಸಿದ್ದಾರೆ.
ಠಾಣೆಗೆ ಕರೆತಂದ ಬಳಿಕ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಏತನ್ಮಧ್ಯೆ ಯೆಸುಮ್ಮಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು ಎಂಬುದಾಗಿ ಡಿಸಿಪಿ ಮಾಹಿತಿ ನೀಡಿದ್ದಾರೆ.