ಬಿಆರ್‌ಎಸ್ ಸರ್ಕಾರದ ಯೋಜನೆಗಳಿಗೆ ಕೌಂಟರ್ ಕೊಡುತ್ತಾ, “ಅಲ್ಪಸಂಖ್ಯಾತರ ಘೋಷಣೆ’ ರೂಪಿಸಿ, ಈ ಬಾರಿ ಕಾಂಗ್ರೆಸ್ ಬುಟ್ಟಿಗೆ ಮುಸ್ಲಿಮರ ಮತಗಳು ಬೀಳುವಂತೆ ಮಾಡುವ ಹೊಣೆಯನ್ನು ಶಬ್ಬೀರ್‌ಗೆ ವಹಿಸಲಾಗಿದೆ. ತೆಲಂಗಾಣ ಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಂಚಾಲಕರೂ ಆಗಿರುವ ಮೊಹಮ್ಮದ್ ಅಲಿ ಶಬ್ಬೀರ್, ಕಮರೆಡ್ಡಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಇತ್ತೀಚೆಗಷ್ಟೇ ಪಕ್ಷದ ಅಲ್ಪಸಂಖ್ಯಾತರ ನಿರ್ಣಯ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
Advertisement
ಈ ಹಿಂದೆ ಆಂಧ್ರದಲ್ಲಿ ಕೋಟ್ಲ ವಿಜಯ ಭಾಸ್ಕರ ರೆಡ್ಡಿ ಅವರ ಸರ್ಕಾರವಿದ್ದ ಸಂದರ್ಭದಲ್ಲಿ ಶಬ್ಬೀರ್ ಅವರು ಅಲ್ಪಸಂಖ್ಯಾತ ಕ್ಷೇಮಾಭಿವೃದ್ಧಿ ಇಲಾಖೆಯನ್ನು ರಚಿಸಿದ್ದಲ್ಲದೆ, ಆಗ ದೇಶದಲ್ಲೇ ಮೊದಲ ಬಾರಿಗೆ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗಾಗಿಯೇ 2 ಕೋಟಿ ರೂ.ಗಳನ್ನು ಮೀಸಲಿಡಲಾಯಿತು. ನಂತರದಲ್ಲಿ ಹಲವು ರಾಜ್ಯಗಳು ಈ ಮಾದರಿಯನ್ನು ಅನುಸರಿಸಿ, ಕೊನೆಗೆ 2006ರಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ಇಂಥದ್ದೊಂದು ಇಲಾಖೆ ತಲೆಎತ್ತಿತು.