Advertisement

ಮಾಸ್ಕ್ ಖರೀದಿಸಲು ಹಣವಿಲ್ಲ : ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡ ತಾತ.!

06:17 PM Apr 23, 2021 | Team Udayavani |

ಮೆಹಬೂಬ್​ನಗರ (ತೆಲಂಗಾಣ): ಕೋವಿಡ್ ಜನರನ್ನು ಎಂತಹ ಪರಿಸ್ಥಿತಿಗೆ ತಂದು ನಿಲ್ಲಸಿದೆ ಅಂದ್ರೆ ಜೀವನವೇ ಸಾಕಪ್ಪ ಎಂಬಷ್ಟರ ಮಟ್ಟಿಗೆ ಜನ ನೊಂದು ಬೆಂದಿದ್ದಾರೆ. ಇನ್ನು ಕೆಲವರು ಸೋಂಕಿಗೆ ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಇಲ್ಲೊಂದು ಹಿರಿ ಜೀವ ಮಾಸ್ಕ್ ಕೊಳ್ಳಲು ತನ್ನ ಬಳಿ ಹಣವಿಲ್ಲ ಎಂಬ ಕಾರಣಕ್ಕೆ ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಧರಿಸಿದ್ದಾರೆ.

Advertisement

ಹೌದು ತೆಲಂಗಾಣದ ಮೆಹಬೂಬ್ ​ನಗರದ ನಿವಾಸಿಯೊಬ್ಬರು ಸರ್ಕಾರಿ ಕಚೇರಿಗೆ ಬರಬೇಕೆಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ.  ಸರ್ಕಾರಿ ಕಚೇರಿಗೆ ಮಾಸ್ಕ್ ಬದಲಿಗೆ ಪಕ್ಷಿಯ ಗೂಡು ಧರಿಸಿ ಆಗಮಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಮುಖವಾಡ ಖರೀದಿ ಮಾಡಲು ಸಾಧ್ಯವಾಗದ ಕಾರಣ ಆತ ಈ ರೀತಿಯಾಗಿ ನಡೆದುಕೊಂಡಿದ್ದಾರೆ.

ತೆಲಂಗಾಣ ರಾಜ್ಯದಲ್ಲಿ ಮಾಸ್ಕ್ ಧರಿಸದವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಅಲ್ಲದೆ ಮಾಸ್ಕ್ ಇಲ್ಲದಿದ್ದರೆ ಯಾವುದೇ ಕಚೇರಿಯೊಳಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಈ ಕಾರಣದಿಂದ ಮೇಕಲಾ ಕುರ್ಮಯ್ಯ ಹಕ್ಕಿಯ ಗೂಡನ್ನೇ ತನ್ನ ಮಾಸ್ಕ್ ಹಾಗಿ ಮಾಡಿಕೊಂಡಿದ್ದು ಗಮನ ಸೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next