ಕಾರ್ಕಳ: ತೆಲಂಗಾಣದ ಶಾಸಕರೊಬ್ಬರು ಮಂಗಳೂರಿನಿಂದ ಶೃಂಗೇರಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅವರ ಜೀಪು ಕಾರ್ಕಳದ ಮಿಯ್ಯಾರು ಬಳಿ ಟಯರ್ ಸ್ಪೋಟಗೊಂಡು ಅಪಘಾತಕ್ಕೊಳಗಾದ ಘಟನೆ ಶನಿವಾರ ನಡೆದಿದೆ. ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ಸಂಭವಿಸಿದೆ.
ವೇಗವಾಗಿ ಸಾಗುತ್ತಿದ್ದ ಜೀಪಿನ ಟಯರ್ ಏಕಾಏಕಿ ಸ್ಟೋಟಗೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ವಾಹನದಲ್ಲಿ ಇದ್ದ ಶಾಸಕರು ಗಾಯಗಳಿಲ್ಲದೆ ಪಾರಾಗಿದ್ದಾರೆ.
ಇದನ್ನೂ ಓದಿ:AliExpress: ಆರ್ಡರ್ ಮಾಡಿದ 4 ವರ್ಷದ ಬಳಿಕ ಬಂತು ಪ್ರಾಡಕ್ಟ್; ಗ್ರಾಹಕನ ಪೋಸ್ಟ್ ವೈರಲ್
ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ನಡುಗೆ ಸಿಲುಕಿದ ಜೀಪು ಜಖಂಗೊಂಡಿದೆ.
ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಪ್ರತ್ಯೇಕ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ.