Advertisement

ದೇಸಿ ಕೀಕಿ ಸಖತ್‌ ವೈರಲ್‌

11:47 AM Aug 06, 2018 | Team Udayavani |

ಹೈದರಾಬಾದ್‌: ವಿಶ್ವವ್ಯಾಪಿಯಾಗಿರುವ “ಕೀಕಿ ಡಾನ್ಸ್‌ ಚಾಲೆಂಜ್‌’ ಭಾರತದಲ್ಲೂ ಹವಾ ಸೃಷ್ಟಿಸಿದ್ದು, ಹಲವಾರು ನಟ, ನಟಿ ಯರು ಈ ಸವಾಲು ಸ್ವೀಕರಿಸಿ ಸುದ್ದಿಯಾಗಿದ್ದಾರೆ. ಆದರೆ, ಅವರೆಲ್ಲರಿಗಿಂತ ತೆಲಂಗಾಣದ ಉದಯೋನ್ಮುಖ ಚಿತ್ರನಟ ಅನಿಲ್‌ ಕುಮಾರ್‌ ಎಂಬುವರು, ರೈತನಾಗಿರುವ ತಮ್ಮ ಮಿತ್ರ ಪಿಲ್ಲಿ ತಿರುಪತಿ ಎಂಬುವರ ಜತೆಗೆ ಕೆಸರು ಗದ್ದೆಯಲ್ಲಿ ಕೀಕಿ ಡಾನ್ಸ್‌ ಮಾಡಿರುವ ವಿಡಿಯೋ ಈಗ ವೈರಲ್‌ ಆಗಿದೆ.

Advertisement

ಚಲಿಸುತ್ತಿರುವ ಕಾರಿನಿಂದ ಕೆಳಗಿಳಿದು ಕಾರಿನ ಜತೆಯಲ್ಲೇ ಕೆನಡಾದ ರ್ಯಾಪರ್‌ ಡ್ರೇಕ್‌ ಅವರ ಮೆಗಾ ಹಿಟ್‌ ಹಾಡಾದ “ಇನ್‌ ಮೈ ಫೀಲಿಂಗ್ಸ್‌’ ಹಾಡಿಗೆ ನೃತ್ಯ ಮಾಡುವುದೇ ಕೀಕಿ ಚಾಲೆಂಜ್‌. ಈವರೆಗೆ ಈ ಸವಾಲು  ಸ್ವೀಕರಿಸಿದ್ದವರೆಲ್ಲರೂ ಇದೇ ರೀತಿಯಲ್ಲೇ ನೃತ್ಯ ಪ್ರದರ್ಶಿಸಿದ್ದಾರೆ.

ಆದರೆ, ಅನಿಲ್‌ ಕುಮಾರ್‌, ಈ ಸವಾಲನ್ನು ದೇಸೀ ಸ್ಟೈಲ್‌ನಲ್ಲಿ ಸ್ವೀಕರಿಸಿದ್ದು ಕೆಸರು ಗದ್ದೆಯಲ್ಲಿ ಸ್ನೇಹಿತನೊಂದಿಗೆ ಎತ್ತುಗಳೊಂದಿಗೆ ಸಾಗುತ್ತಾ ಕುಣಿದಿದ್ದಾರೆ. ಯೂ ಟ್ಯೂಬ್‌ನ “ಮೈ ವಿಲೇಜ್‌ ಶೊ’ ವಾಹಿನಿಯಲ್ಲಿ ಕೇವಲ ನಾಲ್ಕು ದಿನಗಳ ಹಿಂದೆ ಅಪ್‌ಲೋಡ್‌ ಆದ ಈ ವಿಡಿಯೋವನ್ನು ಈವರೆಗೆ 1.82 ಲಕ್ಷ ಮಂದಿ ವೀಕ್ಷಿಸಿದ್ದಾರೆ ಅಲ್ಲದೆ, ಇದೇ ವಾಹಿನಿಯ ಫೇಸ್‌ಬುಕ್‌ ಪೇಜ್‌ನಲ್ಲಿ 3.60 ಲಕ್ಷ ವೀಕ್ಷಣೆ ಹಾಗೂ 54 ಸಾವಿರ ಶೇರ್‌ಗಳನ್ನು ಕಂಡಿದೆ.

ಅಂದಹಾಗೆ, ಈ ದೃಶ್ಯಗಳನ್ನು ತಿರುಪತಿಯಲ್ಲಿನ ಅವರ ಸ್ನೇಹಿತನ ಹೊಲದಲ್ಲಿ ಚಿತ್ರೀಕರಿಸಿದ್ದು, ಇದು “ಮೈ ವಿಲೇಜ್‌ ಶೋ’ ನಿರ್ದೇಶಕ ಶ್ರೀಕಾಂತ್‌ ಪರಿಕಲ್ಪನೆ. 

Advertisement

Udayavani is now on Telegram. Click here to join our channel and stay updated with the latest news.

Next