Advertisement

Lord Balaji: ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಜರಿ ಸೀರೆ ಅರ್ಪಿಸಿದ ತೆಲಂಗಾಣದ ಭಕ್ತ

07:51 PM Apr 10, 2023 | Team Udayavani |

ಆಂಧ್ರಪ್ರದೇಶ: ದೇವರಿಗೆ ಹರಕೆ ರೂಪದಲ್ಲಿ ನಾನಾ ರೀತಿಯ ವಸ್ತುಗಳನ್ನು ನೀಡುವುದು ನೋಡಿದ್ದೇವೆ ಆದರೆ ತೆಲಂಗಾಣದ ಭಕ್ತರೊಬ್ಬರು ತಿರುಪತಿಯಲ್ಲಿರುವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮತ್ತು ತಿರುಚಾನೂರ್‌ ಶ್ರೀ ಪದ್ಮಾವತಿ ದೇವಿ ದೇಗುಲಕ್ಕೆ ಎರಡು ವಿಶಿಷ್ಟ ಸೀರೆಗಳನ್ನು ಸರ್ಮಪಿಸಿದ್ದಾರೆ. ಈ ಪೈಕಿ ಒಂದು ಸೀರೆ ಚಿನ್ನದ ಜರಿಯನ್ನು ಹೊಂದಿದೆ.

Advertisement

ತೆಲಂಗಾಣದ ಭಕ್ತರಾದ ನಲ್ಲ ವಿಜಯ್ ಅವರು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಕೆ ಎಸ್ ಜವಾಹರ್ ರೆಡ್ಡಿ ಅವರ ಮೂಲಕ ಸೀರೆಯನ್ನು ಭಾನುವಾರ ಪೀಠಾಧಿಪತಿಗಳಿಗೆ ಹಸ್ತಾಂತರಿಸಿದ್ದಾರೆ, ಅಂದಹಾಗೆ ಈ ಸೀರೆ ಬೆಂಕಿ ಪೊಟ್ಟಣದ ಒಳಗೆ ಮಡಚಿ ಇಡಬಹುದಾದ ಗಾತ್ರದಲ್ಲಿದೆಯಂತೆ.

“ತಿಮ್ಮಪ್ಪನಿಗೆ ಅರ್ಪಿಸಿದ ಸೀರೆಯ ಬೆಲೆ ಸುಮಾರು 45,000 ರೂಪಾಯಿಗಳಾಗಿದ್ದರೆ ಜೊತೆಗೆ ಪದ್ಮಾವತಿ ದೇವಿಗೆ ನೀಡಿರುವ ಸೀರೆಯಲ್ಲಿ 5 ಗ್ರಾಮ್‌ ಚಿನ್ನದ ಜರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Amritpal Singh ಸಹಚರ ಪಾಪಲ್ಪ್ರೀತ್ ದಿಬ್ರುಗಢ್ ಜೈಲಿಗೆ ಸ್ಥಳಾಂತರ

Advertisement

Udayavani is now on Telegram. Click here to join our channel and stay updated with the latest news.

Next