Advertisement

ಐಸ್‌ಕ್ರೀಂ ಮಾರಿ 7.5 ಲಕ್ಷ ರೂ. “ಕೂಲಿ’ಪಡೆದ ರಾಮರಾವ್‌!

01:29 PM Apr 16, 2017 | Team Udayavani |

ಹೈದರಾಬಾದ್‌: ಕೂಲಿಗಳು ದಿನವಿಡೀ ಕೆಲಸ ಮಾಡಿದ್ರೆ ಎಷ್ಟು  ಕೂಲಿ ಸಿಗಬಹುದು? ನಿಮ್ಮ ಉತ್ತರ 100-200 ರೂ. ಗಳನ್ನು ದಾಟಲಿಕ್ಕಿಲ್ಲ. ಆದರೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಅವರ ಪುತ್ರ,  ಸಂಪುಟ ಸಚಿವ ಕೆ.ಟಿ. ರಾಮ ರಾವ್‌ ಅವರು ಒಂದೆರಡು ಗಂಟೆಗಳಲ್ಲೇ ಬರೋಬ್ಬರಿ 7.30 ಲಕ್ಷ ರೂ. ಕೂಲಿ ಗಳಿಸಿದ್ದಾರೆ. ಅದೂ ಐಸ್‌ಕ್ರೀಂ ಮತ್ತು ಹಣ್ಣಿನ ಜ್ಯೂಸ್‌ ಮಾರಾಟ ಮಾಡಿ! 

Advertisement

ಬಿಸಿಲ ಝಳ ತಾಳಲಾರದೇ ಜನ ಐಸ್‌ಕ್ರೀಂ, ಜ್ಯೂಸ್‌ ಮೊರೆಹೋದರೋ ಏನೋ ಎಂದು ನೀವು ಭಾವಿಸಿದ್ರೆ ಅದು ತಪ್ಪು. ಇಲ್ಲಿ ವಿಷಯ ಬೇಸಿಗೆಯದ್ದಲ್ಲ. ಅದನ್ನು ಮಾರಾಟ ಮಾಡಿದವರದ್ದು. ತೆಲಂಗಾಣ ರಾಷ್ಟ್ರ ಸಮಿತಿಯ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ನಿಧಿ ಸಂಗ್ರಹಕ್ಕಾಗಿ ರಾಮರಾವ್‌ ಅವರು ಶುಕ್ರವಾರ ಒಂದು ದಿನದ ಮಟ್ಟಿಗೆ “ಕೂಲಿ’ಯಾಗಿ ಕೆಲಸ ಮಾಡಿದ್ದಾರೆ. 

ಖುತುಬುಲ್ಲಾಪುರ್‌ನಲ್ಲಿ ಐಸ್‌ ಕ್ರೀಂ ಮತ್ತು ಹಣ್ಣಿನ ಜ್ಯೂಸ್‌ಗಳನ್ನು ಮಾರಾಟ ಮಾಡಿದ್ದಾರೆ. ಅವರು ಕೂಲಿಯಾಗಿದ್ದೇ ತಡ, ಗ್ರಾಹಕರು ಅಂಗಡಿಗೆ ಮುತ್ತಿಗೆ ಹಾಕಿ ಭರ್ಜರಿ ಮೊತ್ತ ನೀಡಿ, ಐಸ್‌ ಕ್ರೀಂ ತಿಂದಿದ್ದೇ ತಿಂದಿದ್ದು. ಟಿಆರ್‌ಎಸ್‌ ಸಂಸದ ಮಲ್ಲ ರೆಡ್ಡಿ ಅವರು 5 ಲಕ್ಷ ರೂ. ನೀಡಿ ಐಸ್‌ ಕ್ರೀಂ ಕೊಂಡರೆ, ಪಕ್ಷದ ಮತ್ತೂಬ್ಬ ನಾಯಕ ಶ್ರೀನಿವಾಸ್‌ ರೆಡ್ಡಿ 1 ಲಕ್ಷ ರೂ. ನೀಡಿ ಖರೀದಿಸಿದ್ದಾರೆ. ಇನ್ನು ಫ್ರುಟ್‌ ಜ್ಯೂಸ್‌ ಅಂಗಡಿಯಲ್ಲಿ ಪಕ್ಷದ ಕಾರ್ಯಕರ್ತರೇ ಬರೋಬ್ಬರಿ 1.30 ಲಕ್ಷ ರೂ.ಗಳ ವ್ಯಾಪಾರ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next