ಹೈದರಾಬಾದ್ : ನಗರದಲ್ಲಿರುವ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಅವರ ನಿವಾಸದ ಮೇಲೆ ಟಿಆರ್‌ಎಸ್ ಬೆಂಬಲಿಗರು ಶುಕ್ರವಾರ ದಾಳಿ ನಡೆಸಿ ದಾಂಧಲೆ ನಡೆಸಿದ್ದಾರೆ. ನೂರಾರು ಕಾರ್ಯಕರ್ತರು ಮನೆಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಧ್ವಂಸ ಗೈದಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ತೆಲಗಾಂಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆ ಮಾಡಿದ್ದಾರೆ ಎಂದು ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ ಆರೋಪ ಮಾಡಿದ ಬೆನ್ನಲ್ಲೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ಬೇರೆ ಪಕ್ಷದವರೂ ಆಕೆಯನ್ನು ಸಂಪರ್ಕಿಸಿದ್ದಾರೆ ಎಂದು ಆಕೆಯ ತಂದೆ ಹೇಳಿದ್ದಾರೆ. ಸ್ವಂತ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆಯೇ ಎಂದು ಬಿಜೆಪಿ ಸಂಸದ ಅರವಿಂದ್ ಅವರು ನಿವಾಸದ ಮೇಲೆ ದಾಳಿ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕೆ.ಕವಿತಾ ತನ್ನ ತಂದೆಯೊಂದಿಗೆ ಅಸಮಾಧಾನಗೊಂಡಿದ್ದಾರೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ನನ್ನ ತಂದೆಯ ಹಳೆಯ ಸ್ನೇಹಿತನಿಂದ ಕರೆ ಬಂದಿತ್ತು ಎಂದು ಅರವಿಂದ್ ಹೇಳಿದ್ದಾರೆ.
ಯಾವುದೇ ಪಕ್ಷ ಸೇರುವ ಆಸಕ್ತಿ ಇಲ್ಲ
ಖರ್ಗೆಯವರಿಗೆ ಕರೆ ಮಾಡಿ ನಾನು ಎಂದಾದರೂ ಕರೆದಿದ್ದೇನೆಯೇ ಎಂದು ಕೇಳಿ. ಯಾವುದೇ ಪಕ್ಷ ಸೇರುವ ಆಸಕ್ತಿ ಇಲ್ಲ.ಟಿಆರ್ ಎಸ್ ಈಗ ಬಿಆರ್ ಎಸ್ ಆಗಿದೆ. ತೆಲಂಗಾಣದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ ಮತ್ತು ದೇಶಾದ್ಯಂತ ಅದೇ ರೀತಿ ಮಾಡಲು ನಾವು ಮಾದರಿಗಳನ್ನು ಮಾಡುತ್ತೇವೆ ಎಂದು ಕೆ.ಕವಿತಾ ಅವರು ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.