Advertisement

Telangana; ಸಮಸ್ಯೆ ಪರಿಹಾರಕ್ಕಾಗಿ ಮೋದಿ ರ‍್ಯಾಲಿಯಲ್ಲಿ ಲೈಟ್ ಟವರ್ ಮೇಲೇರಿದ ಯುವತಿ| Video

09:43 AM Nov 12, 2023 | Team Udayavani |

ಸಿಕಂದರಾಬಾದ್‌: ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರ‍್ಯಾಲಿಯಲ್ಲಿ, ಯುವತಿಯೊಬ್ಬರು ಅವರ ಗಮನ ಸೆಳೆಯಲು ಮತ್ತು ಅವರ ಸಮಸ್ಯೆಗಳ ಬಗ್ಗೆ ಮಾತನಾಡಲು ಲೈಟ್ ಟವರ್ ಏರಿದ ಘಟನೆ ಶನಿವಾರ ನಡೆದಿದೆ. ಮಹಿಳೆಯನ್ನು ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಟವರ್ ನಿಂದ ಕೆಳಗಿಳಿದು ಬರುವಂತೆ ಮನವಿ ಮಾಡಿದರು.

Advertisement

ಯುವತಿ ಎತ್ತರದ ಟವರ್ ಏರುತ್ತಿರುವ ವೀಡಿಯೊ ವೈರಲ್ ಆಗಿದೆ. ತಕ್ಷಣವೇ ಕೆಳಗಿಳಿಯುವಂತೆ ಪ್ರಧಾನಿ ಮೋದಿ ಅವರಿಗೆ ಸೂಚಿಸಿದ್ದಾರೆ, ದೋಷಯುಕ್ತ ವೈರಿಂಗ್‌ ನಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು ಎಂದು ಹೇಳಿದರು.

“ಬೇಟಾ, ನೀಚೆ ಆವೋ (ಕೆಳಗೆ ಬಾ). ನಿಮ್ಮ ಜೊತೆ ನಾವಿದ್ದೇವೆ. ಈ ತಂತಿಯ ಸ್ಥಿತಿ ಉತ್ತಮವಾಗಿಲ್ಲ. ಶಾರ್ಟ್ ಸರ್ಕ್ಯೂಟ್ ಆಗಿರಬಹುದು. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಾನು ನಿನಗಾಗಿ ಬಂದಿದ್ದೇನೆ. ನಾನು ನಿಮ್ಮ ಮಾತನ್ನು ಕೇಳುತ್ತೇನೆ,’’ ಎಂದು ಮೋದಿ ವೇದಿಕೆಯಿಂದಲೇ ಯುವತಿಗೆ ಹೇಳಿದರು.

ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರಧಾನಿ ಭರವಸೆ ನೀಡಿದ ನಂತರ ಯುವತಿ ಕೆಳಗಿಳಿದರು.

Advertisement

ಸಿಕಂದರಾಬಾದ್‌ ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮಾದಿಗ ಸಮುದಾಯವು ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ.

ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯಕ್ಕೆ ತೆಲಂಗಾಣ ಸರ್ಕಾರದಿಂದ ಕಳೆದ 10 ವರ್ಷಗಳಿಂದ ದ್ರೋಹ ಬಗೆದಿದ್ದು, ಇತರ ಪಕ್ಷಗಳು ಮಾಡಿರುವ ಪಾಪಗಳಿಗೆ ಕ್ಷಮೆ ಯಾಚಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next