Advertisement

ಎಂ.ಪಿ ಆಕ್ಸಿ ಬ್ಯಾಂಕ್‌ಗೆ ತೇಜಸ್ವಿ ಸೂರ್ಯ ಚಾಲನೆ

03:03 PM May 10, 2021 | Team Udayavani |

ಬೆಂಗಳೂರು: ನಗರದ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರ ಕಚೇರಿಯಿಂದ 1ಸಾವಿರಕ್ಕೂ ಅಧಿಕ ಆಕ್ಸಿಜನ್‌ ಕಾನ್ಸನ್ಟೆಟರ್‌ಗಳನ್ನು ನಾಗರಿಕರ ಸೇವೆಗೆ ಒದಗಿಸಲಾಗಿದೆ.

Advertisement

ಈಗಾಗಲೇ 100 ಜನ ಕೋವಿಡ್‌ಸೋಂಕಿತರಿಗೆ ಹಾಗೂ ಕೋವಿಡ್‌ ಚಿಕಿತ್ಸೆಪಡೆದು ಗುಣಮುಖರಾದ 150ರೋಗಿಗಳಿಗೆ ಮನೆಗಳಿಗೆ ಕಾನ್ಸನ್ಟೆಟರ್‌ ಸೇವೆ ಒದಗಿಸಲಾಗಿದೆ. ಕೋವಿಡ್‌ ಸೋಂಕಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಯೂನಿಟ್‌ ಗಳ ಆಕ್ಸಿಜನ್‌ ಕಾನ್ಸನ್ಟೆಟರ್‌ ಬ್ಯಾಂಕ್‌ಗೆಭಾನುವಾರ ಆಕ್ಸಿಜನ್‌ ಬ್ಯಾಂಕ್‌ಗೆಚಾಲನೆ ನೀಡಿ ಮಾತನಾಡಿದ ಸಂಸದತೇಜಸ್ವಿ ಸೂರ್ಯ ಈ ವಿಷಯ ತಿಳಿಸಿದರು.

ಕೋವಿಡ್‌-19 ಸೋಂಕಿನಿಂದಬಳಲುತ್ತಿರುವ ನಾಗರಿಕರು, ಬೆಂಗಳೂರುದಕ್ಷಿಣ ಸಂಸದರ ವತಿಯಿಂದಆರಂಭಿಸಲಾಗಿರುವ ಕೋವಿಡ್‌ ರಕ್ಷಾ ಸಹಾಯವಾಣಿ 080 6191 4960ಸಂಖ್ಯೆಗೆ ಕರೆ ಮಾಡಿದಲ್ಲಿ ಸ್ವಯಂ ಸೇವಕರುಕರೆಗೆ ಸ್ಪಂದಿಸಿ ಆಕ್ಸಿಜನ್‌ ಕಾನ್ಸನ್ಟೆಟರ್‌ ಅನ್ನುಅವರ ಮನೆಗೈ ನೇರವಾಗಿತಲುಪಿಸಲಾಗುತ್ತದೆ. ರೋಗಿಗಳ ಹೆಸರು,ವಯಸ್ಸು,ದೂರವಾಣಿ ಸಂಖ್ಯೆ,ಆಕ್ಸಿಜನ್‌ ಸ್ಯಾಚುರೇಷನ್‌ ಪ್ರಮಾಣ, ಆರೋಗ್ಯಸ್ಥಿತಿಗತಿಗಳ ವಿವರಗಳನ್ನು ಸಲ್ಲಿಸಿದ ನಂತರ ಆಧಾರ್‌ ಕಾರ್ಡ್‌, ಪಲ್ಸ್ ಆಕ್ಸಿಮೀಟರ್‌ರೀಡಿಂಗ್‌ ನೊಂದಿಗೆ ರೋಗಿಯ ಫೋಟೋ ಕಳುಹಿಸಬೇಕಾಗುತ್ತದೆ.

ಎಂ ಪಿ ಕಛೇರಿಯ ಸ್ವಯಂಸೇವಕರು ಡಾಕ್ಟರ್‌ಪ್ರೀಸ್ಕ್ರಿಪ್‌ಷನ್‌ ಧೃಢೀಕರಿಸಿಕೊಂಡ ನಂತರಆಕ್ಸಿಜನ್‌ ಕಾನ್ಸನೆóàಟರ್‌ ಅನ್ನು ನೇರವಾಗಿಮನೆಗೆ ತಲುಪಿಸುವ ವ್ಯವಸ್ಥೆಯನ್ನುಆಟೋ ಅಥವಾ ಗೂಡ್ಸ್ ವೆಹಿಕಲ್‌ ಗಳಿಂದ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next