ಹೌದು ಎನ್ನುತ್ತದೆ ಮೂಲಗಳು. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ರಾಜೀನಾಮೆ ನೀಡಲೇಬೇಕು ಎಂದು ಸಿಎಂ ನಿತೀಶ್ ಕುಮಾರ್ ಪಟ್ಟು ಹಿಡಿದಿದ್ದಾರೆ. ಇದೇ 28ರಂದು ಬಿಹಾರ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅದಕ್ಕೆ ಮೊದಲೇ ತೇಜಸ್ವಿ ಡಿಸಿಎಂ ಸ್ಥಾನ ತೊರೆಯಬೇಕು ಎಂದು ನಿತೀಶ್ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯಿಂದ ಮುಖ ಉಳಿಸಿಕೊಳ್ಳಬೇಕೆಂದರೆ ನಿತೀಶ್‌ಗೆ ಇದಲ್ಲದೇ ಬೇರೆ ದಾರಿಯಿಲ್ಲ. ಅದರಂತೆ, ಅವರು ತಮ್ಮ ನಿಲುವನ್ನು ಈಗಾಗಲೇ ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೂ ತಲುಪಿಸಿದ್ದಾರೆ. ಹೀಗಾಗಿ 28ರೊಳಗೆ ತೇಜಸ್ವಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇನ್ನೊಂದೆಡೆ, ರಾಜಿನಾಮೆಯ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದ ಲಾಲು ಅವರೂ ಸ್ವಲ್ಪಮಟ್ಟಿಗೆ ಮೆತ್ತಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೇಜಸ್ವಿ ರಾಜೀನಾಮೆ ಕುರಿತು ತಮ್ಮ ನಿರ್ಧಾರ ಮರುಪರಿಶೀಲಿಸಲು ಅವರು ನಿರ್ಧರಿಸಿದ್ದಾರೆ. ತೇಜಸ್ವಿ ವಿಚಾರದಲ್ಲಿ ಜೆಡಿಯು ಜತೆ ಗಿನ ಮೈತ್ರಿ ಕಳೆದುಕೊಳ್ಳಲು ಲಾಲು ಅವರಿಗೆ ಮನಸ್ಸಿಲ್ಲ. ಹೀಗಾಗಿ, ತೇಜಸ್ವಿ ರಾಜೀನಾಮೆ ಪಡೆದು ಮೈತ್ರಿ ಉಳಿಸಿಕೊಳ್ಳುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.
Advertisement
ಬಿಜೆಪಿ ಸಂಚು?: ಏತನ್ಮಧ್ಯೆ, ಆರ್‌ಜೆಡಿ-ಜೆಡಿಯು ಬಿಕ್ಕಟ್ಟು ಹಿಂದೆ ಬಿಜೆಪಿಯ ಕುತಂತ್ರ ಅಡಗಿದೆ ಎಂದು ಬರೆದಿರುವ ಬ್ಯಾನರ್‌ಗಳು ಪಾಟ್ನಾದ ಬೀದಿ ಗಳಲ್ಲಿ ರಾರಾಜಿಸತೊಡಗಿವೆ. ಬಿಜೆಪಿ ನಾಯಕ ಸುಶೀಲ್ ಮೋದಿ ಹೇಳಿದಂತೆ ಕೆಲ ಜೆಡಿಯು ನಾಯಕರು ಕುಣಿಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.