ಪಣಜಿ : ಸಹೋದ್ಯೋಗಿ ಪತ್ರಕರ್ತೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹೆಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ ಬಾಂಬೆ ಹೈಕೋರ್ಟ್ ನ ಗೋವಾ ಪೀಠದಲ್ಲಿ ವಿಚಾರಣೆಯನ್ನು ಇನ್ ಕ್ಯಾಮರಾ ಮೂಲಕ ವಿಚಾರಣೆ ನಡೆಸುವಂತೆ ತೇಜ್ ಪಾಲ್ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದು, ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಲು ತೇಜ್ ಪಾಲ್ ಪರ ವಕೀಲರು ಕಾಲಾವಕಾಶ ಕೋರಿದ್ದು, ನ್ಯಾಯಾಲಯವು ವಿಚಾರಣೆಯನ್ನು ಆಗಷ್ಟ 31 ಕ್ಕೆ ಮುಂದೂಡಿದೆ.
ಇದನ್ನೂ ಓದಿ : ರೈತ ವಿರೋಧಿ ನೀತಿಯನ್ನು ಕೈ ಬಿಡಿ : ಮುಖ್ಯಮಂತ್ರಿಗೆಳಿಗೆ ಮನವಿ
ತರುಣ್ ತೇಜ್ ಪಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಂಗಳವಾರ, ಆಗಸ್ಟ್ 10) ಬಾಂಬೆ ಹೈ ಕೋರ್ಟ್ ನ ಗೋವಾ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ತೇಜ್ ಪಾಲ್ ಪರ ಹಿರೀಯ ವಕೀಲ ಅಮಿತ್ ದೇಸಾಯಿ ಮತ್ತು ಗೋವಾ ಸರ್ಕಾರದ ವತಿಯಿಂದ ಸ್ಯಾಲಿಸೀಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ಮಾಪ್ಸಾ ಸೆಷನ್ ಕೋರ್ಟ್ ತರುಣ್ ತೇಜ್ ಪಾಲ್ ರನ್ನು ಸಾಕ್ಷಾಧಾರಗಳ ಕೊರತೆಯಿಂದ ನಿರಪರಾಧಿ ಎಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನ ಮೆಟ್ಟಿಲೇರಿತ್ತು.
ಇದನ್ನೂ ಓದಿ : ನಾನು ರಾಜಕಾರಣ ಮಾಡೋಕೆ ಬಂದವನು, ಕಬ್ಬನ್ ಪಾರ್ಕ್ ನೋಡೋಕೆ ಬಂದಿಲ್ಲ: ಪ್ರೀತಂ ಗೌಡ