Advertisement

ತೀಯಾ ಸೇವಾ ಸಹಕಾರ ಸಂಘದ ಸ್ವಸಹಾಯ ಸಂಘಗಳ 22ನೇ ತ್ತೈಮಾಸಿಕ ಸಭೆ

12:37 PM May 09, 2019 | Vishnu Das |

ಮುಂಬಯಿ: ತೀಯಾ ಸೇವಾ ಸಹಕಾರ ಸಂಘ ಪ್ರಯೋಜಕತ್ವದ ತೀಯಾ ಸ್ವಸಹಾಯ ಸಂಘಗಳ 22ನೇ ತ್ತೈಮಾಸಿಕ ಸಭೆಯು ಮೇ 5ರಂದು ಕ್ಲಿಕ್‌ ಸಭಾಂಗಣ ತೊಕ್ಕೊಟ್ಟು ಇಲ್ಲಿ ಜರಗಿತು.

Advertisement

ಕುಮಾರಿ ಸಂಜನಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ, ಮುಂಬಯಿ ಉದ್ಯಮಿ ಚಂದ್ರಶೇಖರ ಬೆಲ್ಚಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. 73 ತೀಯಾ ಸ್ವಸಹಾಯ ಸಂಘಗಳ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸಿದ ಚಂದ್ರಶೇಖರ ಬೆಲ್ಚಡ ಅವರು ಮುಂದಿನ ದಿನಗಳಲ್ಲಿ ಸ್ತ್ರೀಯರು ಇನ್ನಷ್ಟು ಮುಂದೆ ಬಂದು ತಮ್ಮ ಮಕ್ಕಳಲ್ಲಿಯೂ ತೀಯಾ ಜಾತಿಯ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು. ಮನುಷ್ಯನಿಗೆ ಸಮಯಪ್ರಜ್ಞೆ ಬಹಳ ಮುಖ್ಯ. ಬಡವನದರೂ ಪರವಾಗಿಲ್ಲ ಹೃದಯವೈಶಾಲ್ಯ ಇರಬೇಕು. ಒಳ್ಳೆಯ ಕನಸನ್ನು ಹೊಂದಿ ಅದನ್ನು ನನಸಾಗಿಸಬೇಕು. ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳವಾಗಿದೆ. ಮುಂದಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಬಹಳ ರಸವತ್ತಾಗಿ ಮಾತನಾಡಿದರು.

ಅತಿ ಉತ್ತಮ ಸಂಘ ಎಂಬ ಕೀರ್ತಿಗೆ ಶ್ರೀಶಾರದೆ ಸ್ವಸಹಾಯ ಬಹುಮಾನ ಪಡೆದುಕೊಂಡಿತು. ತೀಯಾ ಸಮಾಜ ಉಳ್ಳಾಲ ವಲಯದ ಅಧ್ಯಕ್ಷ ದಿನೇಶ್‌ ಕುಂಪಲ ಅವರು ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಉಷಾ ಮನೋಜ್‌ ವರದಿ ವಾಚಿಸಿದರು. ಯಶವಂತಿ ಜೆ. ಅವರು ಕಾರ್ಯಕ್ರಮ ನಿರೂಪಣೆಗೈದರು. ವೇದಿಕೆಯಲ್ಲಿ ತೀಯಾ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರು ಮಾಧವ ಸುವರ್ಣ, ನಿರ್ದೇಶಕರಾದ ಪ್ರಕಾಶ್‌ ಉಳ್ಳಾಲ್‌, ರಾಜೀವ್‌ ಕೆ. ದಾಮೋದರ ಉಳ್ಳಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next