Advertisement

ಕ್ಷುಲ್ಲಕ ಮಾತಿನ ಜಗಳ : 15ರ ಬಾಲಕಿಯನ್ನು ಹೊಡೆದು ಕೊಂದರು

12:01 PM Jun 07, 2018 | Team Udayavani |

ಶಹಜಹಾನ್‌ಪುರ, ಉತ್ತರ ಪ್ರದೇಶ : ಹದಿನೈದು ವರ್ಷ ಪ್ರಾಯದ ಬಾಲಕಿಯನ್ನು ಹತ್ತು ಜನರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ನಡೆದ ಮಾತಿನ ಜಗಳದ ಪರಾಕಾಷ್ಠೆಯಲ್ಲಿ ಹೊಡೆದು ಕೊಂದ ಅಮಾನುಷ ಘಟನೆ ಇಲ್ಲಿನ ಪರೋರ್‌ ಪ್ರದೇಶದ ಅತ್ರೋಲಿ ಗ್ರಾಮದಲ್ಲಿ ನಡೆದಿದೆ.

Advertisement

ನಿನ್ನೆ ರಾತ್ರಿ ಅತ್ರೋಲಿ ಗ್ರಾಮದ 15ರ ಬಾಲಕಿ ಪ್ರೀತಿ ಎಂಬಾಕೆಯೊಂದಿಗೆ ಕೆಲವರು ಮಾತಿನ ಜಗಳ ನಡೆಸಿ ಅಂತಿಮವಾಗಿ ಆಕೆಯನ್ನು ಸಿಟ್ಟಿನ ಭರದಲ್ಲಿ  ಕೋಲಿನಿಂದ ಮಾರಣಾಂತಿಕವಾಗಿ ಹೊಡೆದರು. ಪರಿಣಾಮವಾಗಿ ಆಕೆಯ ಸ್ಥಳದಲ್ಲೇ ಮೃತಪಟ್ಟಳು. 

ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ತಲೆ ಮರೆಸಿಕೊಂಡಿರುವ ಹತ್ತು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next