Advertisement

ಉತ್ತರ ಪ್ರದೇಶ : ಹದಿಹರೆಯದ ಹುಡುಗಿಯ ಮೇಲೆ ಗ್ಯಾಂಗ್‌ ರೇಪ್‌

12:19 PM Feb 10, 2017 | Team Udayavani |

ಪ್ರತಾಪ್‌ ಗಢ, ಉತ್ತರ ಪ್ರದೇಶ : ಇಲ್ಲಿನ ಪತ್ತಿ ಪ್ರದೇಶದಲ್ಲಿ ಮೂವರು ಕಾಮಾಂಧ ತರುಣರು ಹದಿಹರೆಯದ ಹುಡುಗಿಯ ಮೇಲೆ  ಗ್ಯಾಂಗ್‌ ರೇಪ್‌ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಹದಿನೈದರ ಹರೆಯದ ಹುಡುಗಿಯ ತನ್ನ ಮನೆ ಸಮೀಪದ ಹೊಲಕ್ಕೆ ಹೋಗಿದ್ದಾಗ ಅಲ್ಲಿ ಮೂವರು ತರುಣರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರು. 

ಈ ಘಟನೆ ಸಂಬಂಧ ಆರೋಪಿ ರಂಜನ್‌ ಪಾಲ್‌ ಹಾಗೂ ಇನ್ನಿಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

ಈ ತನಕ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್‌ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next