Advertisement

ಶಿಕ್ಷಣವನ್ನು ಬದಲಾಯಿಸಿದ ತಂತ್ರಜ್ಞಾನ

10:46 PM Jul 09, 2019 | mahesh |

ತಂತ್ರಜ್ಞಾನ ಇಂದು ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಶಿಕ್ಷಣ ಕ್ಷೇತ್ರ ಇದಕ್ಕೆ ಹೊರತಾಗಿಲ್ಲ. ಈ ಕ್ಷೇತ್ರ ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಕಪ್ಪು ಹಲಗೆ ಹೋಗಿ ಸ್ಮಾರ್ಟ್‌ ಹಲಗೆ ತರಗತಿಗಳನ್ನು ಸೇರಿಕೊಂಡಿದೆ. ಸ್ಮಾರ್ಟ್‌ ಹಲಗೆ ಸೇರಿದಂತೆ ಅನೇಕ ತಂತ್ರಜ್ಞಾನಗಳು ಶಿಕ್ಷಣ ಕ್ಷೇತ್ರವನ್ನು ಡಿಜಿಟಲ್‌ ಶಿಕ್ಷಣ ಕ್ಷೇತ್ರದತ್ತ ಕೊಂಡೊಯ್ಯುತ್ತಿದೆ. ಒಂದು ಗುರುಕುಲ ಶಿಕ್ಷಣದಿಂದ ಬದಲಾದ ಕಾಲದಿಂದ ಶಿಕ್ಷಕರಿಲ್ಲದೆ ತಂತ್ರಜ್ಞಾನದ ನೆರವಿನಿಂದ ಕಲಿಯುವ ಹಂತಕ್ಕೆ ತಲುಪಿದ್ದೇವೆ.

Advertisement

ಸ್ಮಾರ್ಟ್‌ ಕ್ಲಾಸ್‌ ರೂಮ್‌
ಡಿಜಿಟಲ್‌ ಪರದೆ, ಡಿಜಿಟಲ್‌ ಬೋರ್ಡ್‌, ಪ್ರೊಜೆಕ್ಟರ್‌ ಮತ್ತು ಸ್ಮಾರ್ಟ್‌ ಕಲಿಕೆಗೆ ಬೇಕಾಗಿರುವ ಇರುವಂತಹ ತರಗತಿ ಸ್ಮಾರ್ಟ್‌ ಕ್ಲಾಸ್‌ ರೂಮ್‌ ಎಂದೆನಿಸಿದೆ. ಸ್ಮಾರ್ಟ್‌ ಕ್ಲಾಸ್‌ ರೂಮ್‌ನಲ್ಲಿ ವಿದ್ಯಾರ್ಥಿಗಳು ಪಠ್ಯ ವಿಷಯಗಳನ್ನು ಸುಲಭವಾಗಿ ಗ್ರಹಿಸಬಹುದು. ಈ ವಿಷಯಗಳು ಮನಸ್ಸಿನಲ್ಲಿ ದೀರ್ಘ‌ಕಾಲ ಉಳಿಯುತ್ತವೆ.ಯಾವುದೇ ಗೊಂದಲ ಇಲ್ಲದೆ ಪಾಠಗಳು ಮಕ್ಕಳಿಗೆ ಅರ್ಥವಾಗುತ್ತವೆ.

ರಜೆ ಸಮಸ್ಯೆಯಾಗದು
ಹಿಂದೆಲ್ಲ ಶಾಲೆಗೆ ಹೋಗದಿದ್ದರೆ ಮರುದಿನ ರಾಶಿ ನೋರ್ಟ್ಸ್ ಬರೆಯುವ ಚಿಂತೆ. ಆದರೆ ಡಿಜಿಟಲ್‌ ಶಿಕ್ಷಣದಿಂದ ತರಗತಿ ಗೈರಾದರೂ ತರಗತಿಯಲ್ಲಿ ನಡೆಯುವ ಪಾಠವನ್ನು ಕೇಳಬಹುದು. ಒಂದು ವೇಳೆ ಅನಿವಾರ್ಯ ಕಾರಣಗಳಿಂದ ತರಗತಿ ತಪ್ಪಿಸಿಕೊಂಡಿದ್ದರೆ ಅಂಥವರು ಮನೆಯಲ್ಲೆ ಲೈವ್‌ ತರಗತಿ ಅಥವಾ ರೆಕಾರ್ಡ್‌ ಮಾಡಿದ ವೀಡಿಯೋಗಳ ಮೂಲಕ ಪಾಠಗಳನ್ನು ಅರಿತುಕೊಳ್ಳಬಹುದು.

ಡಿಜಿಟಲೀಕರಣ ಸಹಕಾರಿ
ಪಠ್ಯಪುಸ್ತಕದಲ್ಲಿರುವ ವಿಷಯಕ್ಕಿಂತ ಹೆಚ್ಚಿನ ಅಂಶಗಳನ್ನು ಡಿಜಿಟಲ್‌ ಶಿಕ್ಷಣ ವ್ಯವಸ್ಥೆಯಿಂದ ಕಲಿಯಲು ಸಾಧ್ಯ. ಪಾಠಕ್ಕೆ ಪೂರಕವಾದ ವಿಷಯಗಳನ್ನು ಈ ಡಿಜಟಲೀಕರಣ ಕಲಿಸುತ್ತದೆ. ಪಠ್ಯದೊಂದಿಗೆ ಜಗತ್ತಿನಲ್ಲಿ ನಡೆಯುವ ಅನೇಕ ವಿಷಯಗಳ ಮಾಹಿತಿಗಳನ್ನು ತಿಳಿಸುವಲ್ಲಿ ಈ ಡಿಜಿಟಲ್‌ ಶಿಕ್ಷಣ ಸಹಕಾರಿ ಸ್ಮಾರ್ಟ್‌ ಶಿಕ್ಷಣದಿಂದ

ವಿದ್ಯಾರ್ಥಿಗಳು ಸ್ಮಾರ್ಟ್‌
ಸ್ಮಾರ್ಟ್‌ ಕ್ಲಾಸ್‌ ರೂಮ್‌, ಆ್ಯಪ್‌ಗ್ಳ ಇಂತಹ ಸ್ಮಾರ್ಟ್‌ ವ್ಯವಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸ್ತಕಿ ಬೆಳೆಯುವುದರ ಜತೆಗೆ ಬುದ್ಧಿ ಚುರುಕಾಗುತ್ತದೆ. ಡಿಜಿಟಲ್‌ ಶಿಕ್ಷಣ ಸ್ಮಾರ್ಟ್‌ ಸ್ಟೂಡೆಂಟ್‌ಗಳನ್ನು ಸೃಷ್ಟಿಸಿರುವುದರಲ್ಲಿ ಸಂಶಯವಿಲ್ಲ.

Advertisement

ಆ್ಯಪ್‌
ಶಾಲಾ ಕಾಲೇಜುಗಳು ಡಿಜಿಟಲ್‌ ಶಿಕ್ಷಣದ ಮೊರೆ ಹೋಗಿವೆ. ಬಹುತೇಕ ಶಾಲಾ ಕಾಲೇಜುಗಳು ತಮ್ಮ ಸಂಸ್ಥೆಯ ಆ್ಯಪ್‌ ಮೂಲಕ ಮಕ್ಕಳೊಂದಿಗೆ ಸಂವಹನ ನಡೆಸುವು ದನ್ನು ಪ್ರಾರಂಭಿಸಿವೆ. ಮಕ್ಕಳ ಹೋಂ ವರ್ಕ್‌, ಅಸೈನ್ಮೆಂಟ್‌ ವರದಿಗಳನ್ನು ಸಹ ಆ್ಯಪ್‌ ಮೂಲಕವೇ ವ್ಯವಹರಿಸುತ್ತಿವೆ. ಇದು ಹೆತ್ತವರಿಗೂ ಮಕ್ಕಳ ಶಾಲಾ ಚಟುವಟಿಕೆಗಳನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ.

ಆನ್‌ಲೈನ್‌ ಪರೀಕ್ಷೆ
ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಶಾಲಾ- ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳು ಇಂದು ಆನ್‌ಲೈನ್‌ ಮೂಲಕ ನಡೆಯುತ್ತವೆ. ಪರೀಕ್ಷೆ, ಮೌಲ್ಯಮಾಪನ ಮತ್ತು ಪ್ರಶ್ನಾ ಪತ್ರಿಕೆ ನೀಡಿಕೆ ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಆಗುವ ಸಾಧ್ಯತೆಗಳು ದಟ್ಟವಾಗಿವೆ.

ಧನ್ಯಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next