ಬೆಳಗಾವಿ: ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಅಷ್ಟೇ ಅಲ್ಲದೇ ಎಲ್ಲ ತಂತ್ರಜ್ಞಾನಗಳು ಮಾನವ ಜೀವನವನ್ನು
ಸುಲಭಗೊಳಿಸುವ ಸಾಧನಗಳಾಗಿವೆ. ಅವುಗಳ ಜ್ಞಾನವನ್ನು ಸಂಪೂರ್ಣವಾಗಿ ಅರಿತು ನಮ್ಮ ದಿನನಿತ್ಯದ ಕಾರ್ಯ ಮತ್ತು ವೃತ್ತಿಪರತೆಯನ್ನು ವೃದ್ಧಿಸಿಕೊಳ್ಳಲು ಬಳಸಬಹುದಾಗಿದೆ ಎಂದು ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ ಹೇಳಿದರು.
Advertisement
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ“ನವ ಜ್ಞಾನ ಉತ್ಪತ್ತಿ ಮತ್ತು ಕೃತಕ ಬುದ್ಧಿಮತ್ತೆ’ ಕುರಿತು ಗುರುವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
ಅಂದಾಜಿಸಿದರು.
Advertisement
ಕೃತಕ ಬುದ್ಧಿಮತ್ತೆ ಸಾಧನದಲ್ಲಿ ಪರಿಣಿತಿ ಪಡೆದಲ್ಲಿ ಮುಂಬರುವ ದಿನಗಳಲ್ಲಿ ಅದು ಉದ್ಯೋಗ ಕಸಿಯುವ ರಾಕ್ಷಸನಾಗದೆ, ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಮತ್ತು ಹೆಚ್ಚಿನ ವೇತನ ನೀಡುವ ಮಿತ್ರನಾಗುವುದು ಖಂಡಿತ. ಹೀಗಾಗಿ ಶಿಕ್ಷಕರು ಕೃತಕ ಬುದ್ಧಿಮತ್ತೆಯನ್ನು ಕಲಿಯುವ ಅವಶ್ಯಕತೆಯಿದೆ. ಒಬ್ಬ ಶಿಕ್ಷಕ ಕೃತಕ ಬುದ್ಧಿಮತ್ತೆ ಕಲಿತರೆ, ಆ ಶಿಕ್ಷಕ ನೂರಾರು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಯಲು ಪ್ರೇರೇಪಿಸುವ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬಹುದು ಎಂದು ಹೇಳಿದರು.
ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಕಲಿಕೆ ನಿರಂತರ. ಹೀಗಾಗಿ ಔದ್ಯೋಗಿಕ ಕ್ಷೇತ್ರದ ಉದ್ಯೋಗ ಬೇಡಿಕೆಗಳನ್ನು ಅರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಹೊಸ ಸಂಗತಿಗಳನ್ನು ಪರಿಚಯಿಸಬೇಕು. ಜ್ಞಾನದ ಫಲದಿಂದ ಸಮಾಜಮತ್ತು ಕೈಗಾರಿಕೆಗಳು ಸಮನಾಂತರವಾಗಿ ಪ್ರಗತಿ ಹೊಂದುತ್ತವೆ. ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಫಲವಾಗಿ ಅನೇಕ ಅದ್ಭುತಗಳನ್ನು ಕಂಡಿರುವ ನಾವು ಮುಂಬರುವ ದಶಕದಲ್ಲಿ ಕೃತಕ ಬುದ್ಧಿಮತ್ತೆಯಿಂದ ಹೊಸ ಹೊಸ ಚಮತ್ಕಾರಗಳನ್ನು ಕಾಣಲು ಸಿದ್ಧರಾಗಬೇಕಾಗಿದೆ ಎಂದು ಹೇಳಿದರು.