ಕೆಂಗೇರಿ: ವಾಣಿಜ್ಯ ಕ್ಷೇತ್ರ ಮತ್ತು ಕರ್ತವ್ಯ ನಿರ್ವಹಣೆ ಮೇಲೆ ತಂತ್ರಜ್ಞಾನದ ಪ್ರಭಾವ ಅಧಿಕ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಹೇಳಿದರು.
ಅವರು ಕೆಂಗೇರಿ ಉಪನಗರದ ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್ ಸ್ಟಡೀಸ್, ಪ್ರೀಮಾಕ್ಸ್ ಫೌಂಡೇಶನ್, ಇಂಡಿಯನ್ ಕೌನ್ಸಿಲ್ ಫಾರ್ ಬ್ಯುಸಿನೆಸ್ ಎಜುಕೇಷನ್, ಮಲ್ಟಿಸ್ಕಿಲ್ಸ್ ಟ್ರೈನಿಂಗ್ ಮತ್ತು ಇಂಡಿಸಿಪ್ಲಿನರಿ ರಿಸರ್ಚ್ ಇನ್ಸಿಟ್ಯೂಟ್, ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ಮತ್ತು ಸೃಷ್ಟಿ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಅಯೋಜಿಸಿದ್ದ ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳು, ತಂತ್ರಜ್ಞಾನ, ವಾಣಿಜ್ಯ ಹಾಗೂ ನಿರ್ವಹಣೆ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಧುನಿಕ ಜೀವನದಲ್ಲಿ ತಂತ್ರಜ್ಞಾನದ ಪ್ರಭಾವವು ಗಾಡವಾಗಿದ್ದು, ಪ್ರತಿಯೊಂದಕ್ಕೂ ಮಾನವ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾನೆ. ಯಾವುದೇ ರಾಜ್ಯದ ಹಾಗು ರಾಷ್ಟ್ರದ ಅಭಿವೃದ್ಧಿಗೆ ತಂತ್ರಜ್ಞಾನ ಪ್ರಧಾನ ಪಾತ್ರವನ್ನು ವಹಿಸುತ್ತಿದೆ ಎಂದು ಹೇಳಿದರು.
ತಂತ್ರಜ್ಞಾನದ ರಾಷ್ಟ್ರೀಯ ಕೌನ್ಸಿಲ್ ಪ್ರಾದೇಶಿಕ ನಿರ್ದೇಶಕ ಡಾ.ವಿಜಯ್‌ಕುಮಾರ್ ಮಾತನಾಡಿ, ಅಧುನಿಕ ತಂತ್ರಜ್ಞಾನದ ಸಮಸ್ಯೆಗಳನ್ನು ಅಂಡ್ರಾಯ್ಡ (ಸ್ಮಾರ್ಟ್ ಫೋನ್)ಗಳ ನೆರವಿಲ್ಲದೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ತಂತ್ರಜ್ಞಾನದ ಹೊಸ ಅವಿಷ್ಕಾರಗಳ ಪ್ರಭಾವ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಥೈಲ್ಯಾಂಡ್‌ನ ಉತ್ತರ ಬ್ಯಾಂಕಾಂಕ್‌ನ ಕಿಂಗ್ ಮಾಂಗ್‌ಕುಟ್ಸ್ ತಾಂತ್ರಿಕ ವಿವಿಯ ಡಾ.ಹಥೀರಟ್ ಕೇಟ್‌ಮಾಣಿಚೈರೇಟ್, ಡಾ.ಮಾಲಿರೇಟ್ ಸೋಡಾನಿಲ್, ಐಐಎಸ್‌ಸಿಯ ಎಕನಾಮಿಕ್ಸ್ ಪ್ರೊ.ಡಾ.ಎಂ.ಎಚ್.ಬಾಲ ಸುಬ್ರಮಣ್ಯ, ಎಸ್‌ಇಟಿ ಟ್ರಸ್ಟ್‌ನ ಖಜಾಂಚಿ ಪಾರ್ಥಸಾರಥಿ, ಸಹಾಯಕ ಕಾರ್ಯದರ್ಶಿ ಎಂ.ಎಸ್.ನಟರಾಜ್, ಪ್ರಾಂಶುಪಾಲ ಪ್ರೊ.ಜಯರಾಮ, ಐಕ್ಯೂಎಫ್ ಕೋಅರ್ಡಿನೇಟರ್ ಯು. ರೂಪಶ್ರೀ, ಲಕ್ಷ್ಮೀಎಸ್ ಸೇರಿದಂತೆ ವಿವಿಧ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.