Advertisement

Bangalore: ಸ್ಕ್ಯಾನಿಂಗ್‌ಗೆ ಬಂದಿದ್ದ ವೃದ್ಧೆಗೆ ಲೈಂಗಿಕ ದೌರ್ಜನ್ಯ: ಟೆಕ್ನಿಶಿಯನ್‌ ಸೆರೆ

10:53 AM Sep 08, 2023 | Team Udayavani |

ಬೆಂಗಳೂರು: ಸ್ಕ್ಯಾನಿಂಗ್‌ ಮಾಡುವಾಗ ವೃದ್ಧ ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಪಶ್ಚಿಮ ಬಂಗಾಳ ಮೂಲದ ಟೆಕ್ನಿಶಿಯನ್‌ ಅಶೋಕ್‌ (24) ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೆಲ ವರ್ಷ ಹಿಂದೆಯೇ ಬೆಂಗಳೂರಿಗೆ ಬಂದಿರುವ ಆರೋಪಿ, ಹೆಬ್ಟಾಳದಲ್ಲಿ ಬಾಡಿಗೆ ಮನೆಯಲ್ಲಿದ್ದು, ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸ್ಕ್ಯಾನಿಂಗ್‌ ಸೆಂಟರ್‌ನಲ್ಲಿ ಟೆಕ್ನಿಶಿಯನ್‌ ಆಗಿದ್ದ.

ಇತ್ತೀಚೆಗೆ 60 ವರ್ಷದ ಮಹಿಳೆಯೊಬ್ಬರಿಗೆ ಹಿರಿಯ ವೈದ್ಯರು ಸಿಟಿ ಸ್ಕ್ಯಾನಿಂಗ್‌ಗೆ ಸಲಹೆ ನೀಡಿದರು. ಹೀಗಾಗಿ, ಸೆ.3ರಂದು ಸೆಂಟರ್‌ಗೆ ಬಂದಿದ್ದಾರೆ. ಆಗ ವೃದ್ಧೆಯನ್ನು ವಿವಸ್ತ್ರಗೊಳಿಸಿ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಅದರಿಂದ ಮುಜುಗರಕ್ಕೊಳಗಾದ ವೃದ್ಧೆ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next