ಕೆಂಗೇರಿ: ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಯುವಕರು ತಂತ್ರಜ್ಞಾನದ ಮೂಲಕ ಕೌಶಲ್ಯ ವೃದ್ಧಿಸಿಕೊಂಡರೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಅಲ್ಲದೆ, ವಿಶ್ವವೇ ಯುವಕರ ಕಡೆ ತಿರುಗಿ ನೋಡುತ್ತದೆ ಎಂದು ಎಂದು ರಾಜ್ಯ ಐಟಿ-ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.
ಆರ್.ವಿ. ಎಂಜಿನಿಯರಿಂಗ್ ಕಾಲೇಜು ಮತ್ತು ಸಿಸ್ಕೊ ಸಂಸ್ಥೆ ಆರಂಭಿಧಿಸಿರುವ “ಇಂಟರ್‌ನೆಟ್ ಆಫ್ ಥಿಂಗ್ಸ್’ ಕೌಶಲ್ಯ ಕೇಂದ್ರಕ್ಕೆ ಚಾಲನೆ ನೀಡಿದ ಅವರು, “ತಾಂತ್ರಿಕ ಆವಿಷ್ಕಾರದಲ್ಲಿ ಅಂತಜಾìಲ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ. ಇದರ ಬಳಕೆಯ ಕೌಶಲವನ್ನು ಎಲ್ಲರೂ ರೂಢಿಸಿಕೊಳ್ಳಧಿಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೌಶಲ್ಯಾಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಕೇಂದ್ರಗಳನ್ನು ತೆರೆಯುತ್ತಿರುಧಿವುದರಿಂದ ಯುವ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ,’ ಎಂದರು.
“ಸಾರಿಗೆ, ಇಂಧನ, ಕೃಷಿ, ಉತ್ಪಾದನಾ ವಲಯ ಸೇರಿದಂತೆ ವಿವಿಧ ಉದ್ಯಮಧಿಗಳಲ್ಲಿ ರಾಜ್ಯ ಸರ್ಕಾರ ಆಧುನಿಕ ತಂತ್ರಜಾnನವನ್ನು ಬಳಸಿಕೊಂಡು ಹೆಚ್ಚಿನ ಆವಿಷ್ಕಾರಗಳನ್ನು ಕೈಗೊಳ್ಳುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ,’ ಎಂದರು.
ಸಿಸ್ಕೊ ಸಿ.ಐ.ಒ. ಇಂಟರ್‌ನ್ಯಾಷಧಿನಲ್‌ನ ಉಪಾಧ್ಯಕ್ಷ ವಿ.ಸಿ. ಗೋಪಾಲರತ್ನಂ ಮಾತನಾಡಿ, “ಹೊಸತನ ಮತ್ತು ಉದ್ಯಮ ಶೀಲತೆ ವ್ಯವಸ್ಥೆ ರೂಪಿಸುವಲ್ಲಿ ಬೆಂಗಳೂರು ಮಹತ್ವದ ಕೇಂದ್ರವಾಗಿದೆ. ಮುಂದಿನ ಐದು ವರ್ಷದಲ್ಲಿ ಐ.ಒ.ಟಿ ಸಂಶೋಧನಾ ಕೇಂದ್ರವು ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ, ಸಂಶೋಧನಾರ್ಥಿಗಳಿಗೆ ತಂತ್ರಜಾnನ ರೂಪಿಸುವಲ್ಲಿ ನೆರವಾಗಲಿದೆ,’ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ಮಾತನಾಡಿ ಕಾಲೇಜಿನಲ್ಲಿ ಸಂಶೋಧಿಧನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮೂಲಕ ವಿದ್ಯಾರ್ಥಿ ಹಾಗೂ ವೃತ್ತಿಪರರಿಗೆ ಸಹಾಯಹಸ್ತ ಚಾಚಲಾಧಿಗುವುದು ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎ.ವಿ.ಎಸ್.ಮೂರ್ತಿ, ರಾಷ್ಟ್ರೀಯ ಆರ್.ವಿ.ಎಂಜಿನಿಧಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಹ್ಮಣ್ಯ, ಕಾಲೇಜಿನ ಹಿರಿಯ ಸಲಹೆಗಾರ ಪ್ರೊ.ರಾಜಾರಾವ್ ಮತ್ತಿತರರು ಉಪಸ್ಥಿತರಿದ್ದರು.