Advertisement

Jio ನೆಟ್‌ವರ್ಕ್‌ನಲ್ಲಿ ತಾಂತ್ರಿಕ ದೋಷ: ಗ್ರಾಹಕರ ಪರದಾಟ

09:11 PM Sep 17, 2024 | Team Udayavani |

ಮುಂಬೈ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಿಲಯನ್ಸ್‌ ಜಿಯೋ ನೆಟ್‌ವರ್ಕ್‌ನಲ್ಲಿ ಮಂಗಳವಾರ ದೋಷ ಕಂಡುಬಂದಿದ್ದು, ಗ್ರಾಹಕರು ಪರದಾಡಿದರು.

Advertisement

ಮೊಬೈಲ್‌ ಇಂಟರ್ನೆಟ್‌, ಜಿಯೋ ಫೈಬರ್‌ ಬಳಕೆದಾರರು ಸಹ ಹಲವು ರೀತಿಯ ಸಮಸ್ಯೆ ಎದುರಿಸಿದರು. ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದರು.

ಶೇ.67ರಷ್ಟು ಜನರಿಗೆ ನೋ ಸಿಗ್ನಲ್‌ ಸಮಸ್ಯೆ ಎದುರಾದರೆ, ಶೇ.19ರಷ್ಟು ಬಳಕೆದಾರರು ಇಂಟರ್ನೆಟ್‌ ಸಮಸ್ಯೆ ಎದುರಿಸಿದರು. ಶೇ.14ರಷ್ಟು ಬಳಕೆದಾರರಿಗೆ ಜಿಯೋ ಫೈಬರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಸಂಸ್ಥೆಯೊಂದರ ಸಮೀಕ್ಷೆ ಪ್ರಕಾರ 10,000 ಮಂದಿ ಈ ತೊಂದರೆಗೆ ತುತ್ತಾಗಿದ್ದರು ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next