Advertisement
ಟಿಬಿಬಿಡಿ 2024 ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಫ್ಲಿಪ್ ಕಾರ್ಟ್ ದೇಶದ 9 ನಗರಗಳಲ್ಲಿ ಇನ್ನೂ 11 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ಫ್ಲಿಪ್ ಕಾರ್ಟ್ ದೇಶಾದ್ಯಂತ ಒಟ್ಟು 83 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಹೊಂದಿದಂತಾಗಿದೆ. ತನ್ನ ಸಾಮಾಜಿಕ-ಆರ್ಥಿಕಾಭಿವೃದ್ಧಿ ಬದ್ಧತೆಯೊಂದಿಗೆ ಫ್ಲಿಪ್ ಕಾರ್ಟ್ ದೇಶದೆಲ್ಲೆಡೆ ತನ್ನ ವಿತರಣಾ ಜಾಲದಲ್ಲಿ 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿ ಮಾಡುತ್ತಿದೆ.
Related Articles
Advertisement
ವಿಶೇಷವಾಗಿ ಮುಂಬರುವ ಹಬ್ಬದ ಸೀಸನ್ ನಲ್ಲಿ ನವೀನ ತಂತ್ರಜ್ಞಾನಗಳನ್ನು ಬಳಸಿಕೊಂಡು ಫ್ಲಿಪ್ ಕಾರ್ಟ್ ತಡೆರಹಿತ ವಿತರಣಾ ಜಾಲ ಕಾರ್ಯಾಚರಣೆಗಳು, ಆಟೋಮೋಟೆಡ್ ವೇರ್ ಹೌಸ್ ಗಳಿಂದ ಡೇಟಾ ಚಾಲಿತ ನಿರ್ಧಾರ ಕೈಗೊಳ್ಳುವವರೆಗೆ ಕಾರ್ಯಾಚರಣೆಯ ದಕ್ಷತೆ ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವ ದಿಸೆಯಲ್ಲಿ ಫ್ಲಿಪ್ ಕಾರ್ಟ್ ತಾಂತ್ರಿಕ ಪರಿಹಾರ ಗಳನ್ನು ಅಳವಡಿಸಿಕೊಂಡಿದೆ.
ಟಿಬಿಬಿಡಿ 2024 ರ ಸಂದರ್ಭದಲ್ಲಿ ವೇಗವಾಗಿ ಮತ್ತು ಅತ್ಯಂತ ಹೆಚ್ಚು ವಿಶ್ವಾಸಾರ್ಹ ವಿತರಣಾ ಸೇವೆಗಳನ್ನು ಖಚಿತಪಡಿಸುತ್ತದೆ. ಇದಲ್ಲದೇ, ಹಬ್ಬದ ಸೀಸನ್ ಪೂರ್ವದಲ್ಲಿ ಹೊಸ ಉದ್ಯೋಗಿಗಳಿಗೆ ಸಮಗ್ರ ರೀತಿಯಲ್ಲಿ ಕೌಶಲ್ಯ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಅವರನ್ನು ಸಜ್ಜುಗೊಳಿಸಲಾಗುತ್ತದೆ. ಈ ಹೊಸ ನೇಮಕಾತಿಗಳು ಫ್ಲಿಪ್ ಕಾರ್ಟ್ ನ ಸಪ್ಲೈ ಚೈನ್ ಅನ್ನು ವೈವಿಧ್ಯಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವೆಂದರೆ, ಮಹಿಳೆಯರು, ವಿಕಲಚೇತನರು ಮತ್ತು LGBTQAI+ ಸಮುದಾಯದವರಿಗೆ ಉದ್ಯೋಗಗಳನ್ನು ನೀಡುವತ್ತ ಫ್ಲಿಪ್ ಕಾರ್ಟ್ ಗಮನಹರಿಸಿದೆ.