Advertisement
ಈ ಬಂಗಲೆಯಲ್ಲಿರುವ ವಿವಿಧ ರೀತಿಯ ಪೀಠೊಪಕರಣಗಳು ಬಂಗಲೆಯ ತಾರಸಿಯ ಒಳಮೈಯಲ್ಲಿದ್ದು, ಇದರೊಳಗಿನ ಶೌಚಾಲಯವೂ ತಲೆಕೆಳಗಾಗಿದೆ. ಇಲ್ಲಿಗೆ ಭೇಟಿ ನೀಡುವ ಜನರು ಇಲ್ಲಿನ ವಿಚಿತ್ರ ದೃಶ್ಯಗಳನ್ನು ತಮ್ಮ ಕೆಮರಾ ಕಣ್ಣಿನಲ್ಲಿ ಖಂಡಿತವಾಗಿ ಸೆರೆಹಿಡಿದುಕೊಳ್ಳುತ್ತಾರೆ. ಈ ಮನೆಯೊಳಗೆ ಪ್ರವೇಶಿಸಿದರೆ ಎಲ್ಲವೂ ಅಪ್‌ಸೆçಡ್ ಡೌನ್ ಆಗಿದ್ದು, ಒಂದು ಹೊಸ ಅನುಭವವನ್ನು ನೀಡುತ್ತದೆ.
Related Articles
Advertisement
ಅಪ್‌ಸೆçಡ್ ಡೌನ್ ಹೌಸ್‌ನ ಸಿಇಒ ಆಗಿರುವ ಟಾಮ್ ಡಿರ್ಸೆ ಅವರು ಹೇಳುವಂತೆ ಈ ಮನೆಯನ್ನು ಒಂದಕ್ಕೊಂದು ಕೋನಗಳಲ್ಲಿ ಸರಳವಾಗಿ ಒಟ್ಟಿಗೆ ಹೊಂದಿಕೊಳ್ಳುವ ಮರದ ಫಲಕಗಳಿಂದ ನಿರ್ಮಿಸಲಾಗಿದೆ. 2013ರಲ್ಲಿ ಮೈನರ್ ಆನ್ ದಿ ಮೂನ್ ಎಂಬ ಯೋಜನೆಯಲ್ಲಿ ಕೆಲಸ ಮಾಡಿದ್ದ ಅಲೆಕ್ಸ್ ಚಿನ್ನೆಕ್ ಎಂಬಾತನೇ ಈ ತಲೆಕೆಳಗಾದ ಮನೆಯನ್ನೂ ನಿರ್ಮಿಸಿದ ಕಲಾವಿದ.
ಈ ಮನೆಯೊಳಗೆ ಕಾಲಿಟ್ಟರೆ ತಲೆ ತಿರುಗುತ್ತದೆ. ಈ ಮನೆಯನ್ನು ಹೊರಗಿನಿಂದ ನೋಡಿದಾಗ ಮನೆ ಸಂಪೂರ್ಣವಾಗಿ ತನ್ನ ಛಾವಣಿಯ ಮೇಲೆ ನಿಂತಂತೆ ಕಾಣುತ್ತದೆ. ಸಂದರ್ಶಕರಿಗೆ ಪಕ್ಕದ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಈ ಮನೆಯೊಳಗೆ ಕಚೇರಿ, ವಾಸಿಸುವ ಸ್ಥಳ, ಮಲಗುವ ಕೋಣೆ ಮತ್ತು ಸ್ನಾನಗೃಹ ಸೇರಿದಂತೆ ಹಲವಾರು ಕೊಠಡಿಗಳಿವೆ. ಮನೆಯೊಳಗೆ ನೈಜ ಪೀಠೊಪಕರಣಗಳು ಮತ್ತು ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ ಅವೆಲ್ಲವೂ ತಲೆಕೆಳಗಾಗಿ ಅಳವಡಿಸಲಾಗಿದೆ. ಕೋಣೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಮರಗಳನ್ನೇ ಬಳಸಲಾಗಿದೆ. ಈ ಮನೆಗಳ ಪ್ರವೇಶಕ್ಕೆ ಸಂದರ್ಶಕರೊಬ್ಬರಿಗೆ 4 ಪೌಂಡ್ (ಭಾರತೀಯ ಹಣದಲ್ಲಿ ರೂ.344/-) ದರವನ್ನು ನಿಗದಿಪಡಿಸಲಾಗಿದೆ.
-ಸಂತೋಷ್ ರಾವ್ ಪೆರ್ಮುಡ
ಬೆಳ್ತಂಗಡಿ