Advertisement

Reliance AGM 2024: ರಿಲಯನ್ಸ್‌ನಿಂದ ಜಿಯೋ ಬ್ರೈನ್‌,100 ಜಿಬಿ ಉಚಿತ ಕ್ಲೌಡ್ ಸೇವೆ!

12:39 AM Aug 30, 2024 | Team Udayavani |

ಮುಂಬಯಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನದ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಎಐ ಜಿಯೋ ಬ್ರೈನ್‌, ಉಚಿತ ಜಿಯೋ ಕ್ಲೌಡ್ ಸಹಿತ ಅನೇಕ ಸೇವೆಗಳನ್ನು ಮುಂಬಯಿಯಲ್ಲಿ ನಡೆದ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುದಾರರ 47ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ಘೋಷಣೆ ಮಾಡಿದೆ. ಈ ಮೂಲಕ ದೇಶದ ಬಹುದೊಡ್ಡ ಕಂಪೆನಿಯಾದ ರಿಲಯನ್ಸ್‌ ಕೃತಕ ಬುದ್ಧಿಮತ್ತೆ ಸೇವೆಗಳಿಗೆ ತೆರೆದುಕೊಂಡಿದೆ.

Advertisement

ಜಿಯೋ ಬ್ರೈನ್‌
ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ ತಂತ್ರ ಜ್ಞಾನ ಬಳಕೆಗೆ ಮುಂದಾಗಿರುವ ರಿಲಯನ್ಸ್‌,”ಜಿಯೋ ಬ್ರೈನ್‌’ ಎಐ ಟೂಲ್‌ ಅಭಿವೃದ್ಧಿ ಪಡಿಸುತ್ತಿದೆ. ಇದಕ್ಕಾಗಿ ಕಂಪೆನಿಯು ಜಾಮ್‌ನಗರದಲ್ಲಿ ಎಐ ಡೇಟಾ ಸೆಂಟರ್‌ ಸ್ಥಾಪಿಸುವುದಾಗಿ ಹೇಳಿದೆ. ದೇಶಾದ್ಯಂತ ತಮ್ಮ ಎಲ್ಲ ಸ್ಥಳಗಳಲ್ಲಿ ಬಹು ಎಐ ಇಂಟಫೇಸ್‌ ಸೌಲಭ್ಯಗಳನ್ನು ನೀಡಲಿದೆ. ಜಿಯೋ ಬ್ರೈನ್‌ ಗ್ರಾಹಕರ ಅಗತ್ಯಗಳನ್ನು ತ್ವರಿತವಾಗಿ ತಿಳಿದುಕೊಂಡು ಹೆಚ್ಚು ನಿಖರವಾಗಿ ಮತ್ತು ತ್ವರಿತವಾಗಿ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಜಿಯೋ ಎಐ ಕ್ಲೌಡ್
ಜಿಯೋ ಎಐ ಕ್ಲೌಡ್ ಮೂಲಕ ಗ್ರಾಹಕರಿಗೆ 100 ಜಿಬಿ ಕ್ಲೌಡ್ ಸೇವೆ ನೀಡುವುದಾಗಿ ರಿಲಯನ್ಸ್‌ ಜಿಯೋ ಘೋಷಿಸಿದೆ. ಈ ಉಚಿತ ಕೊಡುಗೆಯನ್ನು ದೀಪಾವಳಿ ವೇಳೆ ಆರಂಭಿಸಲಿದೆ. ಬಳಕೆ ದಾರರ ಫೋಟೋಗಳು, ವೀಡಿಯೋ ಗಳು, ದಸ್ತಾವೇಜುಗಳು, ಡೇಟಾ ಮತ್ತು ಡಿಜಿಟಲ್‌ ಕಂಟೆಂಟ್‌ಗಳನ್ನು ಅತ್ಯಂತ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ರಿಲಯನ್ಸ್‌ ಇಂಡಸ್ಟ್ರೀಸ್‌ ವಾರ್ಷಿಕ 10 ಲಕ್ಷ ಕೋ.ರೂ. ಆದಾಯ ದಾಟಿದ ದೇಶದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಕಂಪೆನಿ 10,00,122 ಕೋಟಿ ರೂ. ವಹಿವಾಟು ನಡೆಸಿದ್ದರೆ, 79,020 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

ಮತ್ತೆ ಯಾವ ಸೇವೆಗಳು?
-ಜಿಯೋ ಟಿವಿಒಎಸ್‌: ಸ್ಥಳೀಯ ಅಭಿವೃದ್ಧಿಪಡಿಸಿದ ಟಿವಿ ಆಪರೇಟಿಂಗ್‌ ಸಿಸ್ಟಮ್‌ ಜಿಯೋ ಟಿವಿ ಒಎಸ್‌. ಇದು ಟಿವಿ ನೋಡುಗರ ಅನುಭವ ಹೆಚ್ಚಿಸಲಿದೆ.
-ಜಿಯೋ ಟಿವಿ ಐಒಟಿ: ಜಿಯೋ ಹೋಮ್‌ ಐಒಟಿ ಘೋಷಿಸಿದ್ದು, ಸ್ಮಾರ್ಟ್‌ ಸಾಧನಗಳ ನಡುವೆ ತಡೆ ರಹಿತ ಹೊಂದಾಣಿಕೆ ಸಿಗಲಿದೆ. ಬಳಕೆದಾರರು ಗೃಹ ಬಳಕೆ ಸ್ಮಾರ್ಟ್‌ ಸಾಧನಗಳನ್ನು ಒಂದೇ ವೇದಿಕೆಯಡಿ ನಿಯಂತ್ರಿಸಲು ಸಾಧ್ಯವಾಗಲಿದೆ.
-ಹೊಸ ಜಿಯೋ+ ಆಫ‌ರ್‌: ಜಿಯೋ ಟಿವಿ ಪ್ಲಸ್‌ ಸೇವೆಯಡಿ ಗ್ರಾಹಕರಿಗೆ 860ಕ್ಕೂ ಅಧಿಕ ಲೈವ್‌ ಟಿವಿ ಚಾನೆಲ್‌, ಸ್ಟ್ರೀಮಿಂಗ್‌ ಆ್ಯಪ್‌ಒಂದೇ ವೇದಿಕೆಯಲ್ಲಿ ಸಿಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next