Advertisement

ತಾಂತ್ರಿಕತೆ ಶಿಕ್ಷಣ ಅತಿಮುಖ್ಯ: ನಾರಾಯಣ ಸಭಾಹಿತ್‌

05:20 AM Jul 20, 2017 | Harsha Rao |

ಉಡುಪಿ: ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಯುಗದಲ್ಲಿ ತಾಂತ್ರಿಕತೆಯ ಶಿಕ್ಷಣ ಅತೀ ಮುಖ್ಯವಾಗಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಅವರು ಹೇಳಿದರು.

Advertisement

ಮಣಿಪಾಲ ಎಂಐಟಿಯ ಎಲೆಕ್ಟ್ರಿಕಲ್‌ ಸೈನ್ಸ್‌ ವಿಭಾಗಕ್ಕೆ ಹೊಸದಾಗಿ ಪ್ರವೇಶಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅತೀ ಕ್ಷೀಣ ಕಣಗಳನ್ನು ಗುರುತಿಸಿ ಅದರಿಂದ ಆಗುವ ಪರಿಣಾಮಗಳನ್ನು ಕಂಡುಹಿಡಿದಿರುವ ನಾವು ಇಡೀ ಜಗತ್ತನ್ನು ನಿಯಂತ್ರಿಸುವ ಮಟ್ಟದಲ್ಲಿ ಬೆಳೆದಿದ್ದೇವೆ. ತಂತ್ರಜ್ಞಾನದಿಂದಾಗಿ ವಿಶ್ವವನ್ನೇ ಹತ್ತಿರಕ್ಕೆ ತಂದಿದ್ದೇವೆ ಎಂದವರು ಹೇಳಿದರು.
ಮಣಿಪಾಲ ಎಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಅವರು ಮಾತನಾಡಿ, ವಿವಿಧ ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳು ಮಣಿಪಾಲ ಶಿಕ್ಷಣ ಸಂಸ್ಥೆಯನ್ನು ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಸಲು ಸಹಕಾರಿಯಾಗಬೇಕು ಎಂದು ಹೇಳಿದ ಅವರು, ನುರಿತ ತಾಂತ್ರಿ ತಂತ್ರಜ್ಞರಾಗಿ ಹೊರಹೊಮ್ಮಿ ಎಂದರು.
ಜಂಟಿನಿರ್ದೇಶಕ ಡಾ| ಬಿ.ಎಚ್‌.ವಿ. ಪೈ ಸ್ವಾಗತಿಸಿದರು. 
ಪ್ರೊ| ಶೀಬಾ ಡೆರಿಸ್‌ ಕಾರ್ಯಕ್ರಮ ನಿರ್ವಹಿಸಿದರು. ಡಾ| ನಾರಾಯಣ ಶೆಣೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next