ಬೆಂಗಳೂರು: ಕಳೆದ ವರ್ಷ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್‌ನಲ್ಲೇ ಬೆಡ್ ಬ್ಲಾಕಿಂಗ್ ಮಾಡಲಾಗುತ್ತಿದೆ.ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಅಗತ್ಯವಿದ್ದು,ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ.ಪೊನ್ನುರಾಜ್ ನೇತೃತ್ವದಲ್ಲಿರುವ ಸಮಿತಿ ವರದಿ ನೀಡಲಿದೆ.
ಸಾಫ್ಟ್ವೇರ್ ಸುಧಾರಣೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪುನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರತ್ಯೇಕದೂರುಗಳು ಬಂದಿವೆ. ದಿನಕ್ಕೆ 800 ರಿಂದ 1000ಪ್ರಕರಣಗಳಲ್ಲಿ ಬೆಡ್ ಅಲಾಟ್ ಮಾಡುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ನಾವು ಬೆಡ್ ಹಂಚಿಕೆ ಮಾಡಿದನಂತರವೂ ಜನರು ಅಲ್ಲಿಗೆ ಹೋಗುವುದಿಲ್ಲ. ಆಗ ಅದನ್ನು ಅನ್‌ಬ್ಲಾಕ್ ಮಾಡಿ ಇನ್ಮೊಬ್ಬರಿಗೆ ಅಲಾಟ್‌ಮಾಡುವ ಪ್ರಕ್ರಿಯೆ ಇದೆ ಎಂದರು.
ದಕ್ಷಿಣ ವಿಭಾಗದ ಕೋವಿಡ್ ವಾರ್ ರೂಂನ 17ಮಂದಿಯನ್ನು ತೆಗೆದು ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಬಂದಿರುವ ಮಾಹಿತಿಗಳ ಪ್ರಕಾರ ಇವರನ್ನು ಕೆಲವು ದಿನದಹಿಂದೆಯೇ ಕೆಲಸದಿಂದ ತೆಗೆದು ಹಾಕಲಾಗಿದೆ. ಇವರು ಒಂದು ಸಂಸ್ಥೆಯ ಮೂಲಕ ಬಂದಿರುವ ವ್ಯಕ್ತಿಗಳು. ವಾರ್ ರೂಂನಲ್ಲಿರುವವರು ಎಲ್ಲ ತಾತ್ಕಾಲಿಕ ಗುತ್ತಿಗೆ ಸಿಬ್ಬಂದಿ. ಏಜೆನ್ಸಿಗಳ ವರ್ತನೆ,ಅವರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ.ಇದನ್ನೆಲ್ಲ ನೋಡಿ ಏಜೆನ್ಸಿಗಳ ಬದಲಾವಣೆ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಅಲ್ಲದೆ ಹೊಸಸಾಫ್ಟ್ ವೇರ್ ಅಳವಡಿಸಿಕೊಳ್ಳುವ ಬಗ್ಗೆಯೂ ಸಿದ್ಧತೆ ಆಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳಿಗೆ ಎಷ್ಟು ಸಾಮರ್ಥ್ಯಇದೆಯೋ ಅದಕ್ಕೆ ತಕ್ಕಂತೆ ರೋಗಿಗಳನ್ನುದಾಖಲಿಸಿಕೊಳ್ಳಬೇಕು. ಕೆಲವು ಆಸ್ಪತ್ರೆಗಳಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಇರುವುದಿಲ್ಲ. ಸಂಗ್ರಹ ವ್ಯವಸ್ಥೆ ಇರುವುದಿಲ್ಲ. ಆದರೂ, ಹೆಚ್ಚಿನರೋಗಿಗಳನ್ನು ಅಡ್ಮಿಟ್ ಮಾಡುತ್ತಿರುವುದರಿಂದ ತೊಂದರೆ ಆಗುತ್ತಿದೆ.
ಗೌರವ್ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ