ನವದೆಹಲಿ: ಕೃಷಿಕರ ಕಲ್ಯಾಣಕ್ಕಾಗಿ, ಅವರ ಜೀವನವನ್ನು ಸಬಲೀಕರಣ ಮಾಡುವುದಕ್ಕಾಗಿ ಕೇಂದ್ರ ಕೃಷಿ ಮತ್ತು ಕೃಷಿಕರ ಸಬಲೀಕರಣ ಸಚಿವಾಲಯ ಹಲವು ಕ್ರಮಗಳನ್ನು ಜಾರಿ ಮಾಡಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ (ಪಿಎಂಎಫ್ಬಿವೈ) ಮತ್ತು ಪುನರ್ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ (ಆರ್‌ಡಬ್ಲ್ಯೂಬಿಸಿಐಎಸ್), ರೈತೋಪಯೋಗಿ ಸಾಧನಗಳನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್, ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಯೆಸ್ ಟೆಕ್ ಮಾಹಿತಿ ಪುಸ್ತಕ (ಬೆಳೆ ಹೆಚ್ಚು ಮಾಡಿಕೊಳ್ಳಲು ನೆರವಾಗುವ, ಅಂದಾಜಿಸುವ, ಉತ್ತಮ ವ್ಯವಸ್ಥೆ, ಕ್ರಮಗಳನ್ನು ತಿಳಿಸುವ ಕೈಪಿಡಿ), ವಿಂಡ್ಸ್ ಹೆಸರಿನ ಪೋರ್ಟಲ್, ಏಯ್ಡ/ಸಹಾಯಕ್ ಎಂಬ ಆ್ಯಪನ್ನು (ಮನೆಮನೆಗೆ ತೆರಳಿ ಬೆಳೆವಿಮೆಯನ್ನು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ) ಬಿಡುಗಡೆ ಮಾಡಲಾಗಿದೆ.
ಇವೆಲ್ಲ ಬೆಳೆ ವಿಮೆಯನ್ನು ಪಡೆದುಕೊಳ್ಳಲು ರೈತರಿಗೆ ನೆರವಾಗಲಿವೆ ಎಂದು ಕೇಂದ್ರ ಸಚಿವರು ಆಶಾವಾದ ವ್ಯಕ್ತಪಡಿಸಿದ್ದಾರೆ.