Advertisement

ಪ್ರೇಯಸಿಗಾಗಿ ಸೋದರಳಿಯನ ಕೊಲೆ;2 ವರ್ಷಗಳ ನಂತರ ಬಹಿರಂಗ!

06:57 AM Jan 11, 2019 | |

ಹೊಸದಿಲ್ಲಿ: ಸಿನಿಮಾ ಮಾದರಿಯ ಘಟನೆಯೊಂದರಲ್ಲಿ  ಪ್ರೇಯಸಿಗಾಗಿ ಸೋದರಳಿಯನನ್ನು ಹತ್ಯೆಗೈದು ನಾಪತ್ತೆ ದೂರು ನೀಡಿ ರಾಜಾರೋಷವಾಗಿದ್ದ ಎಚ್‌ಆರ್‌ ಮ್ಯಾನೇಜರ್‌ ಒಬ್ಬ 2 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

Advertisement

ಏನಿದು ಘಟನೆ ?

ಹೈದರಾಬಾದ್‌ ಮೂಲದ ಇಂಜಿನಿಯರಿಂಗ್‌ ಕಂಪೆನಿಯೊಂದರಲ್ಲಿ  ಎಚ್‌ ಆರ್‌ ಮ್ಯಾನೇಜರ್‌ ಆಗಿರುವ 37 ರ ಹರೆಯದ ಬಿಜಯ್‌ ಕುಮಾರ್‌ ಮಹಾರಾಣಾ ಎಂಬಾತ ಬಂಧನಕ್ಕೊಳಗಾದ ಆರೋಪಿ.

ಮಹಾರಣಾ ದೆಹಲಿ ಮತ್ತು ನೋಯ್ಡಾದಲ್ಲಿರುವ ವಿವಿಧ ಕಾಲ್‌ಸೆಂಟರ್‌ಗಳಲ್ಲಿ ಕೆಲಸ ಮಾಡಿದ್ದ. ಈತ ಫೆಬ್ರವರಿ 7 , 2016 ರಲ್ಲಿ  ದೆಹಲಿಯ ದ್ವಾರಕಾದಲ್ಲಿರುವ ಫ್ಲ್ಯಾಟ್‌ನಲ್ಲಿ ಸೋದರಳಿಯ  ಜೈ ಪ್ರಕಾಶ್‌‌ನನ್ನು ಹತ್ಯೆಗೈದು, ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿ  ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದ.

ಮಹಾರಾಣಾ ಕಾಲೇಜು ದಿನಗಳಲ್ಲಿ  ಒಡಿಶಾದಲ್ಲಿ  ಪ್ರಿಯಾಂಕಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. 2012ರಲ್ಲಿ ಪ್ರಿಯಾಂಕಾ ದೆಹಲಿಗೆ ಉನ್ನತ ವ್ಯಾಸಂಗಕ್ಕಾಗಿ ಬಂದಿದ್ದಳು. ಮಹಾರಾಣಾ ಕೂಡ ಬಿಸಿಎ ಮುಗಿಸಿ ದೆಹಲಿಗೆ ತೆರಳಿ ಸಿನೀಯರ್‌ ಅಹೋಸಿಯೇಟ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ. 

Advertisement

ಮಹಾರಾಣಾ ಮತ್ತು ಪ್ರಿಯಾಂಕ ನಿರಂತರ ಭೇಟಿಯಾಗಿ ಪ್ರೇಮ ಮುಂದುವರಿಸಿದ್ದರು. ಆದರೆ 2015 ರಲ್ಲಿ ಜೈಪ್ರಕಾಶ್‌ ಹೈದರಾಬಾದ್‌ನಿಂದ ದೆಹಲಿಗೆ ಆಗಮಿಸಿದ್ದ. ಮಹಾರಾಣಾನೊಂದಿಗೆ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ. ಪ್ರಿಯಾಂಕಾ ಪರಿಚಯವಾಗಿ ತುಂಬಾ ಸಲುಗೆಯಿಂದ ವರ್ತಿಸುತ್ತಿದ್ದ.

ಪ್ರಿಯಾಂಕಾಳೊಂದಿಗೆ ಜೈಪ್ರಕಾಶ್‌ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಗೊಂಡು ಹತ್ಯೆಗೈದಿದ್ದಾನೆ. ಶವವನ್ನು ಬಾಲ್ಕನಿಗೆ ಎಳೆದೊಯ್ದು  ಮಣ್ಣು ಹಾಕಿ ಮುಚ್ಚಿ ಟ್ಟಿದ್ದಾನೆ.ಅನುಮಾನ ಬಾರದಂತೆ ಸಸಿಗಳನ್ನು ನಟ್ಟಿದ್ದಾನೆ.

ಮಹಾರಾಣಾ ಕೃತ್ಯ ಅಕ್ಟೋಬರ್‌ 8, 2018 ರಂದು ಬೆಳಕಿಗೆ ಬಂದಿದೆ. ಫ್ಲ್ಯಾಟ್‌ನ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರಿಗೆ ಮಣ್ಣಿನಡಿಯಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ಮಾನವ ಮೂಳೆಗಳು ಸಿಕ್ಕಿವೆ. ಆ ಬಳಿಕ ನಾಪತ್ತೆ ಪ್ರಕರಣಕ್ಕೆ ತಾಳೆ ಹಾಕಿ ನೋಡಿದಾಗ ಹತ್ಯೆಯಾಗಿರುವುದು ಖಚಿತವಾಗಿದೆ. 

ಪೊಲೀಸ್‌ ತನಿಖೆ ಆರಂಭವಾದೊಡನೆಯೇ ಮಹಾರಾಣಾ ನಾಪತ್ತೆಯಾಗಿದ್ದ.ಕುಟುಂಬ ಸದಸ್ಯರಿಗಾಗಲಿ, ಸ್ನೇಹಿತರಿಗಾಗಲಿ ಆತ ಎಲ್ಲಿದ್ದ ಎನ್ನುವುದು ತಿಳಿದಿರಲ್ಲಿಲ್ಲ. 

ಪೊಲೀಸರು ತಂತ್ರಜ್ಞಾನದ ಸಹಕಾರ ಬಳಸಿಕೊಂಡು,ವಾರಗಳ ಕಾಲ ಕಾರ್ಯಾಚರಣೆ ನಡೆಸಿ ಕಳೆದ ಭಾನುವಾರ ಹೈದರಾಬಾದ್‌ನಲ್ಲಿ ಬಂಧಿಸಿ ದೆಹಲಿಗೆ ಕರೆ ತಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next