Advertisement

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

10:56 AM Apr 24, 2024 | Team Udayavani |

ಬೆಂಗಳೂರು: ಅಶ್ಲೀಲ ವಿಡಿಯೋ ಮಾದರಿಯಲ್ಲಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ಕೊಂದಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ನನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಹೇರೋಹಳ್ಳಿ ನಿವಾಸಿ ನವೀನ್‌(28) ಬಂಧಿತ ಆರೋಪಿ. ಈತ ಏ.19ರಂದು ಎಂ.ಶೋಭಾ(48) ಎಂಬಾಕೆಯನ್ನು ಕೊಲೆಗೈದು, ಆಕೆಯ ಕಾರು ಸಮೇತ ಪರಾರಿ ಯಾಗಿದ್ದ. ಈ ಸಂಬಂಧ ಶೋಭಾ ಅವರ ಪುತ್ರಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶೋಭಾ ಪತಿ ಚಿಕ್ಕಪೇಟೆಯಲ್ಲಿ ವಾಸವಾಗಿದ್ದು, ಈಕೆ ಕೊಡಿಗೇಹಳ್ಳಿಯಲ್ಲಿ ಡ್ರೈವಿಂಗ್‌ ಶಾಲೆ ತೆರೆದು, 2ನೇ ಪುತ್ರಿಯ ಜತೆ ಗಣಪತಿನಗರದಲ್ಲಿ ಪ್ರತ್ಯೇಕವಾಗಿ ವಾಸವಾ ಗಿದ್ದರು. ಮೊದಲ ಪುತ್ರಿಗೆ ಮದುವೆಯಾಗಿದ್ದು, ಆಕೆ ಪತಿ ಜತೆ ವಾಸವಾಗಿದ್ದಾರೆ. ಏ.4ರಂದು ತಮ್ಮ 2ನೇ ಪುತ್ರಿಗೂ ಮದುವೆ ಮಾಡಿದ್ದರು. ಈ ನಡುವೆ ಶೋಭಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಈ ವೇಳೆ ಮೈಸೂರು ಮೂಲದ ಟೆಕಿ ನವೀನ್‌ ಪರಿಚಯವಾಗಿದೆ. ಜತೆಗೆ ಈತ ಮಾಡುತ್ತಿದ್ದ ರೀಲ್ಸ್‌ಗಳನ್ನು ಈಕೆ ಲೈಕ್‌ ಮಾಡುತ್ತಿದ್ದರು. ಹೀಗಾಗಿ ಇಬ್ಬರು ಆನ್‌ಲೈನ್‌ನಲ್ಲಿ ಚಾಟಿಂಗ್‌ ಆರಂಭಿಸಿದ್ದಾರೆ. ನಂತರ ಪರಸ್ಪರ ಮೊಬೈಲ್‌ ನಂಬರ್‌ ಬದಲಾಯಿಸಿಕೊಂಡು, ಕರೆ ಹಾಗೂ ವಾಟ್ಸ್‌ ಆ್ಯಪ್‌ ಚಾಟಿಂಗ್‌  ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಕೆಲ ತಿಂಗಳ ಹಿಂದೆ ಇಬ್ಬರು ಆರ್‌.ಟಿ.ನಗರದ ಹೋಟೆಲ್‌ವೊಂದರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಅತಿಯಾದ ಸೆಕ್ಸ್‌ ಆಸೆಗೆ ಬಲಿಯಾದ ಶೋಭಾ?: ಏ.18ರಂದು ಪ್ರಿಯಕರ ನವೀನ್‌ಗೆ ಕರೆ ಮಾಡಿದ ಶೋಭಾ, ರಾತ್ರಿ ಮನೆಗೆ ಬರುವಂತೆ ಆಹ್ವಾನಿ ಸಿದ್ದಾರೆ. ಅದರಂತೆ ರಾತ್ರಿ 10 ಗಂಟೆ ಸುಮಾರಿಗೆ ಹೆಬ್ಬಾಳ ಬಳಿ ಬಂದ ನವೀನ್‌ನನ್ನು ಈಕೆಯೇ ತನ್ನ ಕಾರಿನಲ್ಲಿ ಮನೆಗೆ ಕರೆ ತಂದಿದ್ದಾರೆ. ಬಳಿಕ ಇಬ್ಬರು ಊಟ ಮುಗಿ ಸಿದ್ದು, ಈಕೆ ಮದ್ಯ ಸೇವಿಸಿದ್ದಾಳೆ. ಬಳಿಕ ಶೋಭಾ, ನವೀನ್‌ಗೆ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಪ್ರಚೋದಿಸಿದ್ದಾರೆ. ಆದರೆ, ಆತ ನಿರಾಕರಿಸಿದ್ದಾನೆ. ಕೆಲ ಹೊತ್ತಿನ ಬಳಿಕ ನವೀನ್‌ನನ್ನು ಮತ್ತೂಮ್ಮೆ ಪ್ರಚೋದಿಸಿದ ಶೋಭಾ ಆತನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಬಳಿಕ ಮತ್ತೂಮ್ಮೆ ನವೀನ್‌ ಬಳಿ ಬಂದು ಅಶ್ಲೀಲ ವಿಡಿಯೋ ತೋರಿಸಿ, ಈ ಮಾದರಿಯಲ್ಲಿ ಲೈಂಗಿಕ ಕ್ರಿಯೆ ನಡೆಸೋಣ ಎಂದು ಪೀಡಿಸಿದ್ದಾರೆ. ಅದಕ್ಕೆ ನಿರಾಕರಿಸಿದ ನವೀನ್‌, ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದಿ ದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಯಾಗಿದ್ದು, ಅದು ವಿಕೋಪಕ್ಕೆ ಹೋಗಿದೆ. ಅಲ್ಲದೆ, ಗಲಾಟೆ ವೇಳೆ ಗಾಯಗೊಂಡಿದ್ದ ಆತನ ಕೈಗೆ ಮತ್ತಷ್ಟು ಗಾಯಗೊಳಿಸಿದ್ದಾರೆ.  ಅದರಿಂದ ಇನ್ನಷ್ಟು ಕೋಪಗೊಂಡ ಆರೋಪಿ, ಶೋಭಾರ ಕತ್ತು ಹಿಸುಕಿ ಕೊಲೆಗೈದು, ಬಳಿಕ ಮನೆ ಮುಂದೆ ನಿಂತಿದ್ದ ಶೋಭಾರ ಕಾರಿನಲ್ಲೇ ಪರಾರಿ ಯಾಗಿದ್ದ. ಮರು ದಿನ ಶೋಭಾರ 2ನೇ ಪುತ್ರಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡು ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

1.80 ಲಕ್ಷ ರೂ. ಡ್ರಾ ಮಾಡಿದ್ದ ಆರೋಪಿ

ಶೋಭಾರನ್ನು ಹತ್ಯೆಗೈದ ಬಳಿಕ ಆರೋಪಿ ನವೀನ್‌, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಮೊಬೈಲ್‌, ಕಾರು ಕಳವು ಮಾಡಿ ಪರಾರಿಯಾಗಿದ್ದ. ಆಕೆಯ ಮೊಬೈಲ್‌ ಹಿಂಭಾಗದಲ್ಲಿದ್ದ ಎಟಿಎಂ ಕಾರ್ಡ್‌ನಿಂದ 2 ಎಟಿಎಂ ಕೇಂದ್ರದಲ್ಲಿ 1.80 ಲಕ್ಷ ರೂ. ಡ್ರಾ ಮಾಡಿದ್ದಾನೆ. ಅಲ್ಲದೆ, ಕಾರನ್ನು ನಗರದ ಗಡಿಭಾಗದಲ್ಲಿ ನಿಲ್ಲಿಸಿ ಪರಾರಿಯಾಗಿದ್ದ. ತನಿಖೆ ಆರಂಭಿಸಿದಾಗ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next