Advertisement
ಇದು ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಡ ಮಿನಿ ವಿಜ್ಞಾನ ಲೋಕದ ಚಿತ್ರಣ. ಕಾಲೇಜಿನ ಪ್ರಾಜೆಕ್ಟ್ ಸಪೋರ್ಟ್ ಸ್ಕೀಮ್‌ನಡಿ 20 ಲಕ್ಷ ರೂ. ವೆಚ್ಚದಲ್ಲಿ ಮಂಗಳವಾರ ಆಯೋಜಿಸಿದ್ದ ಟೆಕ್‌ವಿಷನ್- 2018’ರಪ್ರದರ್ಶನದಲ್ಲಿ ಕಾಲೇಜಿನ ಯುವ ಎಂಜಿನಿಯರ್‌ಗಳ ತಂತ್ರಜ್ಞಾನದ ಆಲೋಚನೆಗಳಿಗೆ ಹೊಸ ರೂಪು ನೀಡಲಾಯಿತು.
ಅಡಿಕೆ ಬೆಳೆಗಾರರು ತಮ್ಮ ಬೆಳೆಯನ್ನು ಮಾರಾಟ ಮಾಡುವ ವೇಳೆ ಎದುರಿಸುವ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನವನ್ನು ಯುವ ಎಂಜಿನಿಯರ್‌ಗಳು ಮಾಡಿದ್ದಾರೆ. ಕಾಲೇಜಿನ ಪ್ರಥಮ ವರ್ಷದ ಯುವ ವಿಜ್ಞಾನಿಗಳ ತಂಡ ಅಡಿಕೆ ಗುಣ ಮಟ್ಟವನ್ನು ಪ್ರತ್ಯೇಕಿಸುವ ‘ಟ್ರೈಕ್ವಾಸ್’ ಯಂತ್ರವನ್ನು ಕಂಡಿಹಿಡಿದಿದ್ದು, ಈ ಯಂತ್ರದಲ್ಲಿ ಅಡಿಕೆಯನ್ನು ಗುಣಮಟ್ಟದ ಆಧಾರದಲ್ಲಿ ಪ್ರತ್ಯೇಕಿಸಬಹುದಾಗಿದೆ.
Related Articles
Advertisement
ಈ ಯಂತ್ರಕ್ಕೆ ಎಕ್ಸ್‌ರೇಯನ್ನು ಅಳವಡಿಸಿ ಇದಕ್ಕೆ ಇನ್ನಷ್ಟು ಹಣವನ್ನು ವೆಚ್ಚ ಮಾಡುವ ಮೂಲಕ ಈ ತಂತ್ರಜ್ಞಾನವನ್ನು ಮತ್ತಷ್ಟು ಸುಧಾರಿಸಿ ಕೊಳ್ಳಬಹುದು ಎಂದು ತಂಡದ ಧನುಷ್ ವಿಶ್ವಾಸದಿಂದ ಹೇಳುತ್ತಾರೆ. ಸ್ಫೂರ್ತಿ ಅವರ ಮಾರ್ಗದರ್ಶನದಲ್ಲಿ ಮಾಡಲಾದ ಈ ಪ್ರಾಜೆಕ್ಟ್ಗೆ 1,800 ರೂ. ವೆಚ್ಚ ತಗುಲಿದೆ.
ಸೋಲಾರ್ ಏರ್ ಕೂಲರ್ಸೋಲಾರ್ ಮೂಲಕ ಸೋಲಾರ್ ಏರ್ ಕೂಲರನ್ನು ಅಂತಿಮ ಮೆಕ್ಯಾನಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ರಾಘವೇಂದ್ರ ಶೆಟ್ಟಿ, ನಿತೇಶ್ ಶೆಟ್ಟಿ, ನಿಕ್ಷಿತ್ ಶೆಟ್ಟಿ ಹಾಗೂ ಶ್ರೀಜಿತ್ ತಯಾರಿಸಿದ್ದಾರೆ. ಸೋಲಾರ್‌ನಿಂದ ಚಲಿಸುವ ಫ್ಯಾನ್ ಮುಂಭಾಗದಲ್ಲಿ ನೀರು ಹರಿದಾಗ ಫ್ಯಾನ್‌ನಿಂದ ತಂಪಾದ ಗಾಳಿ ಬೀಸುತ್ತದೆ. 8,750 ರೂ. ವೆಚ್ಚದಲ್ಲಿ ಈ ಸೋಲಾರ್ ಏರ್ ಕೂಲರನ್ನು ರಚಿಸಲಾಗಿದ್ದು, ಐಸ್ ನೀರನ್ನು ಉಪಯೋಗಿಸುವ ಮೂಲಕ ಇನ್ನಷ್ಟು ತಂಪಾದ ಅನುಭವನ್ನು ಪಡೆಯಲು ಸಾಧ್ಯ ಎಂಬುದು ಈ ವಿದ್ಯಾರ್ಥಿಗಳ ಅಭಿಪ್ರಾಯ. ಬಳಸಿದ ಪೇಪರ್‌ಗಳ ಮರುಬಳಕೆ
ಈಗಾಗಲೇ ಬಳಸಿದ ಪೇಪರ್‌ಗಳನ್ನು ಕಸದ ಬುಟ್ಟಿ ಹಾಕುವ ಬದಲು ಮರು ಬಳಕೆ ಮಾಡಲು ಸಾಧ್ಯವಾಗುವ ಯಂತ್ರಗಳನ್ನು ವಿದ್ಯಾರ್ಥಿಗಳಾದ ನವೀದ್, ಆಕಾಶ್, ವೈಶಾಕ್ ಮತ್ತು ಮಹೇಶ್ ಕಂಡು ಹಿಡಿದಿದ್ದಾರೆ. ಪೇಪರ್ ರಿಸೈಕ್ಲಿಂಗ್ ಮೆಷಿ ನ್‌ನಲ್ಲಿ ರದ್ದಿ ಪೇಪರ್‌ಗಳನ್ನು ಬಳಕೆಯ ಪೇಪರ್ ಆಗಿ ಪರಿವರ್ತಿಸಬಹುದಾಗಿದೆ. ಬಳಕೆಯಾದ ಪೇಪರ್‌ಗಳಲ್ಲಿನ ಇಂಕನ್ನು ಅಳಿಸಲು ಅಗತ್ಯವಾದ ರಾಸಾಯನಿಕ ಮಿಶ್ರಣವನ್ನು ಬಳಸುವ ಮೂಲಕ ಮತ್ತೆ ಬಿಳಿಯಾದ ಪೇಪರ್ ಬಳಕೆಗೆ ಸಿಗಲಿದೆ.