Advertisement

ಸದ್ಯದಲ್ಲೇ “ಡಾಟರ್‌ ಆಫ್ ಪಾರ್ವತಮ್ಮ’ಚಿತ್ರದ ಟೀಸರ್‌ 

11:16 AM Sep 28, 2018 | |

ಹರಿಪ್ರಿಯಾ ಹಾಗೂ ಸುಮಲತಾ ಅಭಿನಯದ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರ ಡಬ್ಬಿಂಗ್‌ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಜೆ. ಶಂಕರ್‌ ನಿರ್ದೇಶನದ ಈ ಚಿತ್ರ ಒಂದು ಕ್ರೈಮ್‌ ಸುತ್ತ ಸುತ್ತುವ ಕಥೆ ಹೊಂದಿದೆ. ನಿರ್ದೇಶಕ ಶಂಕರ್‌ಗೆ ಇದು ಮೊದಲ ಚಿತ್ರ.

Advertisement

ಈ ಹಿಂದೆ ಪವನ್‌ ಒಡೆಯರ್‌ ಜೊತೆ “ರಣವಿಕ್ರಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಒಂದು ತನಿಖೆಯ  ಕಥೆ ಹೆಣೆದು ಚಿತ್ರ ಮಾಡಿದ್ದಾರೆ. ಅಂದಹಾಗೆ, ದಿಶಾ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕೆಂ.ಶಶಿಧರ್‌, ಎಂ.ವಿಜಯಲಕ್ಷ್ಮೀ, ಕೃಷ್ಣೇಗೌಡ ಹಾಗು ಇತರರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರಕ್ಕೆ ಅರುಳ್‌ ಕೆ. ಸೋಮಸುಂದರನ್‌ ಕ್ಯಾಮೆರಾ ಹಿಡಿದರೆ, ಮಿಥುನ್‌ ಮುಕುಂದನ ಅವರು ಸಂಗೀತ ನೀಡಿದ್ದಾರೆ. ಸುರೇಶ್‌ ಆರ್ಮುಗಂ ಸಂಕಲನ ಮಾಡುತ್ತಿದ್ದಾರೆ. ಚಿತ್ರಕ್ಕೆ ಪ್ರಗತಿ ರಿಷಭ್‌ಶೆಟ್ಟಿ ಹಾಗೂ ಪುಟ್ಟರಾಜು ಅವರ ವಸ್ತ್ರವಿನ್ಯಾಸವಿದೆ. 

Advertisement

Udayavani is now on Telegram. Click here to join our channel and stay updated with the latest news.

Next