ಏ… ನಿಲ್ಲೇ ಈ ವೇಷದಲ್ಲಿ ಎಲ್‌ಹೋಗ್ತಿದ್ದೀಯಾ?’ ಒಳಗೆಲ್ಲೋ ಇದ್ದ ಅಮ್ಮ, ಹೊರಹೋಗಲು ಹೊಸ್ತಿಲಿನಾಚೆ ಒಂದು ಕಾಲು ಇಟ್ಟಿರೋ ಮಗಳನ್ನು ಕಂಡು, ಗಾಬರಿಯಲ್ಲಿ ಹೀಗೆ ಕಿರಿಚುತ್ತಿದ್ದಾಳೆ ಅಂದ್ರೆ ಏನೋ ಎಡವಟ್ಟಾಗಿದೆ ಅಂತಾನೇ ಅರ್ಥ. ಮತ್ತೆಲ್ಲೂ ಅನಾಹುತ ಆಗಿರುವ ಸಾಧ್ಯತೆ ಕಡಿಮೆ. ಆಕೆ ತೊಟ್ಟುಕೊಂಡಿರುವ ಡ್ರೆಸ್‌ನಲ್ಲೇ ಹೆಚ್ಚುಕಡಿಮೆ ಆಗಿರಬೇಕು.
ಕೊಂಚ ಗಿಡ್ಡದ್ದು ಅನ್ನೋದು ಬಿಟ್ಟರೆ ಟಾಪ್ ಬಗ್ಗೆ ಬೇರೇನೂ ಕಂಪ್ಲೇಟ್ಸ್ ಇಲ್ಲ. ಪ್ರಾಬ್ಲೆಮ್ ಇರೋದೇ ತಿರುಪೆ ಪ್ಯಾಂಟ್‌ನಲ್ಲಿ. ಮಗಳ ಪಾಲಿಗೆ ಅದು ಲೇಟೆಸ್ಟ್ ಡಿಸೈನ್‌ನ ಟ್ರೆಂಡಿ ಪ್ಯಾಂಟ್. ಮೊನ್ನೆ ಮೊನ್ನೆ ಅಪ್ಪನಿಗೆ ಸೋಪು ಹಚ್ಚಿ ಸಾವಿರಾರು ರೂಪಾಯಿ ವಸೂಲಿ ಮಾಡಿ ಕೊಂಡುಕೊಂಡಿದ್ದು. ಅಮ್ಮನಿಗೆ ಗೊತ್ತಾಗದ ಹಾಗೆ ವಾರ್ಡ್‌ರೋಬ್ ಒಳಗೆ ಬಚ್ಚಿಟ್ಟುಕೊಂಡಿದ್ದು. ಒಳಗೆ ಕೆಲ್ಸದಲ್ಲಿ ಬ್ಯುಸಿಯಾಗಿರುವ ಅಮ್ಮನ ಕಣ್ಣು ತಪ್ಪಿಸಿ ಡೆನಿಮ್‌ನ್ನು ಸೊಂಟಕ್ಕೇರಿಸಿಕೊಂಡು ಹೊರಟದ್ದು. ಟೈಮ್ ಸರಿ ಇರಲಿಲ್ಲ. ರೆಡ್‌ಹ್ಯಾಂಡ್ ಆಗಿ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದು.
“ಮೊದುÉ ಆ ಪ್ಯಾಂಟ್ ಬಿಸಾಕಿ, ಬೇರೆ ಹಾಕು. ಇದನ್ನ ಹಾಕ್ಕೊಂಡು ಮನೆಹೊರಗೆ ಹೋದ್ರೆ ಸುಮ್ಮನಿರಲ್ಲ ನೋಡು, ಮೊದೆÉà ಹೇಳಿದ್ದೀನಿ’ ಅಮ್ಮನ ರೌದ್ರಾವತಾರ ಕಂಡು ಮಗಳ ಬಿಪಿಯೂ ಏರುತ್ತೆ. “ಇದು ಟ್ರೆಂಡ್. ನನ್ನ ಫ್ರೆಂಡ್ಸೆಲ್ಲ ಹಾಕ್ಕೊಳ್ತಾರೆ. ನಾನ್ಯಾಕೆ ಹಾಕ್ಕೊಬಾರ್ದು. ನಿನ್ನ ಮಗಳು ಗುಗ್ಗೂ ಥರ ಇರೋದು ನಿನಗಿಷ್ಟನಾ?’ ತನ್ನ ಮೊಬೈಲ್‌ನಲ್ಲಿ ಇಂಥ ಪ್ಯಾಂಟ್ ತೊಟ್ಟ ಬಾಲಿವುಡ್, ಸ್ಯಾಂಡಲ್‌ವುಡ್ ಬೆಡಗಿಯರಿಂದ ಹಿಡಿದು ಪಕ್ಕದ್ಮನೆ ಪದ್ಮ ಆಂಟಿ ಮಗಳು ರಚಿತಾ ಫೊಟೋನೋ ತೋರಿಸ್ತಾಳೆ.
ಅಮ್ಮ ಕೊಂಚ ಮೃದುವಾದರೂ, “ಅವ್ರು ಏನ್ಬೇಕಾದ್ರೂ ಹಾಕ್ಕೊಳಲಿ. ನೀನು ಮಾತ್ರ ಇದನ್ನ ಚೇಂಜ್ ಮಾಡಲೇಬೇಕು’ ಹಿಡಿದ ಪಟ್ಟು ಸಡಿಲಿಸದೇ ಹೇಳ್ತಾಳೆ. ಅಮ್ಮ ಈ ಲೆವೆಲ್‌ಗೆ ಇಳಿದ ಮೇಲೆ ಅವಳನ್ನು ಕನ್ವಿನ್ಸ್ ಮಾಡಿ ತನ್ನಿಷ್ಟದ ತಿರುಪೆ ಡೆನಿಮ್ ಪ್ಯಾಂಟ್ ಹಾಕ್ಕೊಂಡು ಹೋಗೋದನ್ನು ಮಗಳಿಗೆ ಹೇಳಿಕೊಡಬೇಕಾ?
ಸೆಲೆಬ್ರಿಟಿಗಳನ್ನು ಬಿಟ್ಟು ರಿಪ್ಡ್ ಪ್ಯಾಂಟ್‌ನ° ಮೊದಲ ಬಾರಿ ತೊಟ್ಟ ಸಾಮಾನ್ಯರಿಗೆಲ್ಲ ಇಂತಹದ್ದೊಂದು ಸನ್ನಿವೇಶ ಎದುರಾಗಿರುತ್ತೆ. ಮೊದಲಿದ್ದ ಮಂಕಿಪ್ಯಾಚ್‌ನ್ನೇ ವ್ಯಂಗ್ಯವಾಗಿ ನೋಡುತ್ತಿದ್ದ ಮಂದಿ, ಉದ್ದಾನುದ್ದ ಹರಿದಿರೋ ಪ್ಯಾಂಟ್‌ಗಳನ್ನು ನೋಡಿ ಮೂಛೆì ಹೋಗೋದೊಂದು ಬಾಕಿ. ಟ್ರೆಂಡ್‌ನಲ್ಲೇ ತೇಲಾಡುವ ಯುವಜನತೆಗೆ ಮಾತ್ರ ಅದು ಚಿಂದಿಯಾಗಿರಲಿ, ಬೀದಿಯಲ್ಲಿ ಬಿದ್ದಿರೋ ಬಟ್ಟೆ ಥರನೇ ಇರಲಿ, ಟ್ರೆಂಡ್ ಅಂತ ಸರ್ಟಿಕೇಟ್ ಸಿಕ್ಕಿದ್ರೆ ಸಾಕು, ಅವರದನ್ನು ತೊಟ್ಟುಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ.
ಸೆಲೆಬ್ರಿಟಿಗಳಂತೂ ಟ್ರೆಂಡೇ ತಾವಾಗಿರುವವರು. ಸದ್ಯಕ್ಕೀಗ ಬಾಲಿವುಡ್‌ನ ಹೆಚ್ಚಿನೆಲ್ಲ ಸೆಲೆಬ್ರಿಟಿಗಳೂ ರಿಪ್ಡ್ ಪ್ಯಾಂಟ್‌ಗೆ ಮನಸೋತಿದ್ದಾರೆ. ಔಟಿಂಗ್ ಹೋಗ್ಲಿ, ಶೂಟಿಂಗ್ ಹೋಗ್ಲಿ ಅರೆಬರೆ ಹರೊಡಿರೋ ರಿಪ್ಡ್ ಜೀನ್ಸ್‌ನಲ್ಲಿ ಬಿಂದಾಸ್ ಆಗಿರ್ತಾರೆ. ಸೋ, ಚಿಂದಿ ಉಡಾಯ್ಸಿ.