Advertisement
ರಸ್ತೆ ಅಪಘಾತವಾದಾಗ ಕಾರಿನಲ್ಲಿ ಮೃತ ಸಚಿನ್ ಸೇರಿ ಐವರು ಇದ್ದರು ಎಂದು ಎಸ್‌ಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದರೆ, ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಿದ ಹೊಸಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಮಹಾಂತೇಶ್, ಮೃತ ಸಚಿನ್ ಸೇರಿ ನಾಲ್ವರು ಬಂದಿದ್ದರು. ರಾಹುಲ್, ಶಿವ ಕುಮಾರ್, ರಾಕೇಶ್ ಗಾಯಾಳುಗಳು ಮತ್ತು ಸಚಿನ್ ಮೃತದೇಹ ಬಂದಿತ್ತು ಎಂದು ಹೇಳಿದ್ದಾರೆ.
Related Articles
Advertisement
ಬೆಂಗಳೂರಿಗೆ ತಂಡ: ಅಪ ಘಾತಕ್ಕೆ ಸಂಬಂಧಿಸಿದಂತೆ ಎಸ್‌ಪಿ ಸಿ.ಕೆ. ಬಾಬಾ ಯಾವುದೇ ಪ್ರತ್ಯೇಕ ತಂಡ ರಚಿಸಲ್ಲ ಎಂದು ಗುರುವಾರ ಹೇಳಿಕೆ ನೀಡಿದ್ದರು. ಆದರೆ, ಸಿಪಿಐ ಶೇಖರಪ್ಪ ನೇತೃತ್ವದ ತಂಡ ವೊಂದನ್ನು ಬೆಂಗಳೂರಿಗೆ ಕಳುಹಿಸಿ ಗಾಯಾಳುಗಳನ್ನು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ. ಇದರಿಂದ ಮಾಧ್ಯಮಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವ ಪೊಲೀ ಸರು ಘಟನೆಯಲ್ಲಿ ಸಚಿವ ಆರ್.ಅಶೋಕ್ ಪುತ್ರ ಶರತ್ ಇಲ್ಲವೆಂಬುದನ್ನು ಸಾಬೀತುಪಡಿ ಸಲು ಹೊರಟಂತಿದೆ ಎನ್ನಲಾಗುತ್ತಿದೆ.
ಸಿಪಿಐ ಶೇಖರಪ್ಪ ನೇತೃತ್ವದಲ್ಲಿ ವಿಚಾರಣೆ: ರಸ್ತೆ ಅಪಘಾತ ನಡೆದ ಫೆ.10ರಂದು ನಮ್ಮ ಗಾಡಿ ಪಂಕ್ಚರ್ ಆಗಿದ್ದ ಹಿನ್ನೆಲೆಯಲ್ಲಿ ಮೃತ ರವಿನಾಯ್ಕ ಮತ್ತು ನಾನು ಪಂಕ್ಚರ್ ಹಾಕಿಸಿಕೊಳ್ಳಲು ಹೋಗಿದ್ದೆವು. ರಸ್ತೆ ಬದಿ ಟಿ ಕುಡಿಯುತ್ತಾ ನಿಂತಿದ್ದಾಗ ಅತ್ಯಂತ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು.
ನೋಡ ನೋಡುತ್ತಿದ್ದಂತೆಯೇ ಘಟನೆ ನಡೆದು ನಾನು ಮೂಛೆì ಹೋದೆ. ನಂತರ ಏನಾಯ್ತು ಎನ್ನುವುದು ಗೊತ್ತಾಗಲೇ ಇಲ್ಲ. ಕಾರಲ್ಲಿ ನಾಲ್ಕೈದು ಜನ ಇದ್ದರು. ಎಚ್ಚರವಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದೇನೆ. ಕಾರಲ್ಲಿರುವುದು ಸಚಿವರ ಪುತ್ರರೋ ಯಾರೊ ಗೊತ್ತಿಲ್ಲ. ಅಪಘಾತಕ್ಕೆ ವೇಗವೇ ಕಾರಣವಾಗಿದ್ದು ನಮಗೆ ನ್ಯಾಯಕೊಡಿಸಿ ಎಂದು ಮಾಧ್ಯಮಗಳ ಬಳಿ ಲಕ್ಷ್ಮಣ ಅಳಲು ತೋಡಿಕೊಂಡಿದ್ದಾರೆ.