Advertisement

ಕೋವಿಡ್ ಮೂಲ ಸ್ಥಳದ ಶೋಧನೆ; ತನಿಖಾ ತಂಡ ಭೇಟಿಗೆ ಚೀನಾ ಅನುಮತಿ; ವಿಶ್ವಸಂಸ್ಥೆ ಸ್ವಾಗತ

06:55 PM Jan 11, 2021 | Team Udayavani |

ಜಿನೇವಾ: ಕೋವಿಡ್ 19 ಉಗಮ ಸ್ಥಳವಾದ ವುಹಾನ್ ಭೇಟಿಯ ತನಿಖಾ ತಂಡದ ಪ್ರವೇಶಕ್ಕೆ ಅನುವು ಮಾಡಿಕೊಡುವುದಾಗಿ ಘೋಷಿಸಿರುವ ಚೀನಾದ ನಡೆಯನ್ನು ಸ್ವಾಗತಿಸುವುದಾಗಿ ವಿಶ್ವಸಂಸ್ಥೆ ಸೋಮವಾರ(ಜನವರಿ 11, 2021) ತಿಳಿಸಿದೆ.

Advertisement

ಕೋವಿಡ್ ಮೊದಲು ಪತ್ತೆಯಾದ ವುಹಾನ್ ಗೆ ಅಂತಾರಾಷ್ಟ್ರೀಯ ತಜ್ಞರ ತಂಡ ಜನವರಿ 14ರಂದು ಭೇಟಿ ನೀಡಲಿದ್ದು, ನಂತರ ಈ ಕುರಿತು ಅಧ್ಯಯನ ನಡೆಸಲಿದ್ದಾರೆ ಎಂದು ರಾಯಿಟರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ತನಿಖಾ ತಂಡದ ಭೇಟಿಗೆ ಅನುವು ಮಾಡಿಕೊಟ್ಟಿರುವ ಚೀನಾದ ಘೋಷಣೆ ಸ್ವಾಗತಿಸುವುದಾಗಿ ವಿಶ್ವಸಂಸ್ಥೆ ಪ್ರಧಾನ ನಿರ್ದೇಶಕ ಟೆಡ್ರೋಸ್ ತಿಳಿಸಿದ್ದು, ನಾವು ಚೀನಾದ ಜತೆ ನಿಕಟವಾಗಿ ಕಾರ್ಯನಿರ್ವಹಿಸುವುದನ್ನು ಬಯಸುವುದಾಗಿ ಹೇಳಿದರು.

ಇಡೀ ಮಾನವ ಜಗತ್ತಿನ ಮೇಲೆ ಪರಿಣಾಮ ಬೀರಿದ ಸೋಂಕಿನ ಮೂಲ ಹಾಗೂ ಆ ಕುರಿತು ಅಧ್ಯಯನ ನಡೆಸುವ ಕಠಿಣ ಸವಾಲಿನ ಕೆಲಸಕ್ಕೆ ಸಹಕಾರ ನೀಡಬೇಕಾಗಿದೆ ಎಂದು ಟೆಡ್ರೋಸ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next