Advertisement

ವೈಟ್‌ವಾಶ್‌ ತಪ್ಪಿಸಿಕೊಂಡೀತೇ ಟೀಮ್‌ ಇಂಡಿಯಾ?

09:54 AM Feb 12, 2020 | sudhir |

ಮೌಂಟ್‌ ಮೌಂಗನಿ: ಭಾರತ 14 ವರ್ಷಗಳ ಬಳಿಕ ಏಕದಿನ ಸರಣಿಯಲ್ಲಿ ವೈಟ್‌ವಾಶ್‌ ಭೀತಿಗೆ ಸಿಲುಕಿದೆ. ನ್ಯೂಜಿಲ್ಯಾಂಡ್‌ ವಿರುದ್ಧ ಮಂಗಳವಾರ ಇಲ್ಲಿನ “ಬೇ ಓವಲ್‌’ನಲ್ಲಿ 3ನೇ ಹಾಗೂ ಅಂತಿಮ ಹಣಾಹಣಿ ನಡೆಯಲಿದ್ದು, ಟೀಮ್‌ ಇಂಡಿಯಾ ಇದನ್ನು ಉಳಿಸಿಕೊಳ್ಳುವುದರ ಜತೆಗೆ ಮರ್ಯಾದೆಯನ್ನೂ ಉಳಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದೆ.

Advertisement

ಇನ್ನೊಂದೆಡೆ, ಟಿ20 ಸರಣಿಯ 5-0 ಸೋಲಿಗೆ ಏಕದಿನದಲ್ಲಿ 3-0 ಅಂತರದಿಂದ ಸೇಡು ತೀರಿಸಿಕೊಳ್ಳುವ ಯೋಜನೆ ನ್ಯೂಜಿಲ್ಯಾಂಡಿನದ್ದು. ಮೊದಲೆರಡು ಪಂದ್ಯಗಳನ್ನು ಗೆದ್ದಿರುವ ಕಿವೀಸ್‌ ಇದೇ ಲಯದಲ್ಲಿ ಸಾಗಿ ಕೊಹ್ಲಿ ಪಡೆಯನ್ನು ಕಾಡುವ ಎಲ್ಲ ಸಾಧ್ಯತೆ ಇದೆ. ನಾಯಕ ಕೇನ್‌ ವಿಲಿಯಮ್ಸನ್‌ ಮರಳಿದ್ದರಿಂದ ಬ್ಲ್ಯಾಕ್‌ಕ್ಯಾಪ್ಸ್‌ ಪಾಳೆಯದಲ್ಲಿ ಸಂಭ್ರಮ, ಉತ್ಸಾಹ ಸಹಜವಾಗಿಯೇ ಹೆಚ್ಚಿದೆ.

ಕಳೆದ ವರ್ಷದ ನ್ಯೂಜಿಲ್ಯಾಂಡ್‌ ಪ್ರವಾಸದ ವೇಳೆ ಭಾರತ ಏಕದಿನ ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿತ್ತು. ಆದರೆ ಟಿ20 ಸರಣಿಯನ್ನು 1-2ರಿಂದ ಕಳೆದುಕೊಂಡಿತ್ತು. ಅಂದು ಯಾರೂ ವೈಟ್‌ವಾಶ್‌ ಅವಮಾನಕ್ಕೆ ಸಿಲುಕಿರಲಿಲ್ಲ. ಈ ಬಾರಿ ಫ‌ಲಿತಾಂಶ ಉಲ್ಟಾ ಆಗಿದೆ. ಭಾರತ ಕೊನೆಯ ಸಲ 2014ರಲ್ಲಿ ನ್ಯೂಜಿಲ್ಯಾಂಡಿನಲ್ಲಿ ಏಕದಿನ ಸರಣಿ ಸೋತಿತ್ತು. ಅಂತರ 1-4.

Advertisement

Udayavani is now on Telegram. Click here to join our channel and stay updated with the latest news.

Next