Advertisement

ಭಾರತದ ಸಾಂಘಿಕ ಹೋರಾಟಕ್ಕೆ 257ರನ್‌ ಜಯ: ಸರಣಿ ಕೈವಶ

09:58 AM Sep 04, 2019 | keerthan |

ಕಿಂಗ್ಸ್ಟನ್:‌ ವೆಸ್ಟ್‌ ಇಂಡೀಸ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಆಲ್‌ ರೌಂಡ್‌ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ 257 ರನ್‌ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡಿಕೊಂಡಿದೆ.

Advertisement

ತೃತೀಯ ದಿನದ ಅಂತ್ಯದಲ್ಲಿ 45 ರನ್‌ ಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ನಾಲ್ಕನೇ ದಿನ 210 ರನ್‌ ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಭಾರತಕ್ಕೆ ಶರಣಾಯಿತು.  ಶಮಾರ್ಹ್‌ ಬ್ರೂಕ್ಸ್‌ 50 ರನ್‌ ಗಳಿಸಿ ವಿಂಡೀಸ್ ಪಾಲಿನ ಏಕೈಕ ಅರ್ಧಶತಕ ಸಿಡಿಸಿದರು. ಡ್ಯಾರೆನ್‌ ಬ್ರಾವೋ ಗಾಯಾಳಾಗಿ ಹೊರ ನಡೆದಿದ್ದರಿಂದ ಅವರ ಬದಲಿಗೆ ಬ್ಯಾಟಿಂಗ್‌ ಗೆ ಇಳಿದ ಜರ್ಮೈನ್‌ ಬ್ಲಾಕ್‌ ವುಡ್‌ 38, ನಾಯಕ ಜೇಸನ್‌ ಹೋಲ್ಡರ್‌ 39 ರನ್‌ ಗಳಿಸಿದರು.

ರವೀಂದ್ರ ಜಡೇಜಾ ಮತ್ತು ಮೊಹಮ್ಮದ್‌ ಶಮಿ ತಲಾ ಮೂರು ವಿಕೆಟ್‌ ಪಡೆದರೆ, ಇಶಾಂತ್‌ ಶರ್ಮಾ ಎರಡು ಮತ್ತು ಬುಮ್ರಾ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next