ಚೆನ್ನೈ: ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಟೀಂ ಇಂಡಿಯಾ ಅದೇ ಅಂಗಳದಲ್ಲಿ ಎರಡನೇ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದು ಸರಣಿ ಸಮಬಲಗೊಳಿಸಿದೆ.
482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಭಾರತೀಯ ಸ್ಪಿನ್ನರ್ ಗಳ ಜಾಲಕ್ಕೆ ಸುಲಭವಾಗಿ ತುತ್ತಾಯಿತು. ಕೇವಲ 164 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 317 ರನ್ ಅಂತರದ ಸೋಲನುಭವಿಸಿತು.
ಇಂಗ್ಲೆಂಡ್ ಸರದಿಯಲ್ಲಿ ಮೋಯಿನ್ ಅಲಿ 43 ರನ್ ಗಳಿಸಿದರೆ, ನಾಯಕ ರೂಟ್ 33 ರನ್ ಗಳಿಸಿದರು. ಡೇನಿಯಲ್ ಲಾರೆನ್ಸ್ 26 ಮತ್ತು ರೋರಿ ಬರ್ನ್ಸ್ 25 ರನ್ ಗಳಿಸಿದರು.
ಭಾರತದ ಪರ ಮೊದಲ ಪಂದ್ಯವಾಡುತ್ತಿರುವ ಅಕ್ಷರ್ ಪಟೇಲ್ ಐದು ವಿಕೆಟ್ ಪಡೆದರೆ. ರವಿ ಅಶ್ವಿನ್ ಮೂರು ವಿಕೆಟ್ ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ: 329 ಮತ್ತು 286
ಇಂಗ್ಲೆಂಡ್ 134 ಮತ್ತು 164