ಕ್ಯಾನ್ ಬೆರಾ: ಬ್ಯಾಟಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಮತ್ತು ಬೌಲಿಂಗ್ ನಲ್ಲಿ ಶಾರ್ದೂಲ್ ಠಾಕೂರ್, ನಟರಾಜನ್ ಉತ್ತಮ ಪ್ರದರ್ಶನದ ಫಲವಾಗಿ ಟೀಂ ಇಂಡಿಯಾ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಏಕದಿನ ಸರಣಿ ಆಸ್ಟ್ರೇಲಿಯಾ ಪಾಲಾದರೂ, ಭಾರತ ಇಂದಿನ ಗೆಲುವಿನೊಂದಿಗೆ ವೈಟ್ ವಾಷ್ ಅವಮಾನ ತಪ್ಪಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟಿಂ ಇಂಡಿಯಾ ಐದು ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿದರೆ, ಗುರಿ ಬೆನ್ನತ್ತಿದ ಆಸೀಸ್ 289 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಭಾರತ ತಂಡ 13 ರನ್ ಜಯ ಸಾಧಿಸಿತು.
ಭಾರತ ಪರ ಹಾರ್ದಿಕ್ ಪಾಂಡ್ಯ 92 ರನ್, ಜಡೇಜಾ 66 ರನ್ ಮತ್ತು ವಿರಾಟ್ ಕೊಹ್ಲಿ 63 ರನ್ ಗಳಿಸಿದರು. ಆಸೀಸ್ ಪರ ನಾಯಕ ಫಿಂಚ್ 77 ರನ್, ಮ್ಯಾಕ್ಸ್ ವೆಲ್ 59 ಮತ್ತು ಕೀಪರ್ ಕ್ಯಾರಿ 39 ರನ್ ಗಳಸಿದರು.
ಭಾರತದ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಕಿತ್ತರೆ, ಮೊದಲ ಪಂದ್ಯವಾಡುತ್ತಿರುವ ನಟರಾಜನ್ ಮತ್ತು ಬುಮ್ರಾ ತಲಾ ಎರಡು ವಿಕೆಟ್ ಪಡೆದರು.
ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಎರಡು ಶತಕ ಬಾರಿಸಿದ ಸ್ಟೀವ್ ಸ್ಮಿತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.