Advertisement
ನಾಲ್ಕನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 258 ರನ್ ಮಾಡಿದ್ದ ಆಸ್ಟ್ರೇಲಿಯಾ ರವಿವಾರದ ಆಟದಲ್ಲಿ ಕೇವಲ 3 ರನ್ ಸೇರಿಸಿ ಸೋಲೊಪ್ಪಿಕೊಂಡಿತು. ದಿನದಾಟದ ಆರಂಭದಲ್ಲಿ ಕಾಣಿಸಿಕೊಂಡ ಮಳೆ ಭಾರತದ ಗೆಲುವಿಗೆ ಅಡ್ಡಲಾಗಿತ್ತು. ಆದರೆ ಭೋಜನ ಸಮಯದ ನಂತರ ನಿಂತ ಮಳೆಯಿಂದಾಗಿ ಮತ್ತೆ ಆರಂಭವಾದ ಆಟದಲ್ಲಿ ಭಾರತ ಕೇವಲ 4.3 ಓವರ್ ನಲ್ಲಿ ಆಸೀಸ್ ನ ಕೊನೆಯ ಎರಡು ವಿಕೆಟ್ ಪಡೆದು ಮೆಲ್ಬೋರ್ನ್ ಅಂಗಳದಲ್ಲಿ ವಿಜಯ ಪತಾಕೆ ಹರಿಸಿತು.
ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ : 151
ಭಾರತ ದ್ವಿತೀಯ ಇನ್ನಿಂಗ್ಸ್: 8 ವಿಕೆಟ್ ಗೆ 106 ಡಿಕ್ಲೇರ್
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್; 261
Related Articles
*ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ಅತೀ ಹೆಚ್ಚು ಟೆಸ್ಟ್ ಗೆಲುವು ಕಂಡ ಭಾರತೀಯ ನಾಯಕನೆಂಬ ಗಂಗೂಲಿ ದಾಖಲೆ ಸರಿದೂಗಿಸಿದರು . ಕೊಹ್ಲಿ ಒಟ್ಟು 24 ಪಂದ್ಯಗಳಿಂದ 11 ಗೆಲುವು. ಗಂಗೂಲಿ 28 ಪಂದ್ಯಗಳಿಂದ 11 ಗೆಲುವು.
* ಈ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಅತೀ ಹೆಚ್ಚು ಅಂದರೆ 4 ವಿದೇಶಿ ಗೆಲುವು ಕಂಡಿತು. ( ಜೋಹಾನ್ಸ್ ಬರ್ಗ್, ಟ್ರೆಂಟ್ ಬ್ರಿಜ್, ಅಡಿಲೇಡ್, ಮೆಲ್ಬೋರ್ನ್ ) ಈ ಹಿಂದೆ 1968ರಲ್ಲಿ ಭಾರತ 3 ವಿದೇಶಿ ಗೆಲುವು ದಾಖಲಿಸಿತ್ತು.
* ನಾಯಕ ಕೊಹ್ಲಿಯ ‘ ಟಾಸ್ ವಿನ್ ಮ್ಯಾಚ್ ವಿನ್ ‘ ಮತ್ತೆ ಮುಂದುವರಿಯಿತು. ಕೊಹ್ಲಿ ನಾಯಕನಾಗಿ ಒಟ್ಟು21 ಪಂದ್ಯಗಳಲ್ಲಿ ಟಾಸ್ ಗೆದ್ದಿದ್ದು 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 3 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ವಿದೇಶದಲ್ಲಿ9 ಪಂದ್ಯದಲ್ಲಿ ಟಾಸ್ ಗೆದ್ದಿದ್ದು ಅದರಲ್ಲಿ 8 ರಲ್ಲಿ ಭಾರತ ವಿಜಯಿಯಾಗಿದೆ. ಬಾಂಗ್ಲಾದೇಶ ವಿರುದ್ದದ ಒಂದು ಪಂದ್ಯ ಡ್ರಾ ಆಗಿದೆ.
* ಜಸ್ಪ್ರೀತ್ ಬುಮ್ರಾಹ್ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ದಾಖಲೆ ಬರೆದರು. (48 ವಿಕೆಟ್ ) ಬುಮ್ರಾಹ್ ಇದುವರೆಗೆ ಭಾರತದ ನೆಲದಲ್ಲಿ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ ಎನ್ನುವುದನ್ನು ಗಮನಿಸಬೇಕು.
* ಬುಮ್ರಾಹ್ ಆಸ್ಟ್ರೇಲಿಯಾದಲ್ಲಿ ಒಂದು ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ವೇಗದ ಬೌಲರ್ ಆಗಿ ಮೂಡಿಬಂದರು. ( 9) ಈ ಹಿಂದೆ ಕಪಿಲ್ ದೇವ್ ಮತ್ತು ಅಜಿತ್ ಅಗರ್ಕರ್ ತಲಾ 8 ವಿಕೆಟ್ ಪಡೆದ ಸಾಧನೆ ಮಾಡಿದ್ದರು.
* ರಿಷಭ್ ಪಂಥ್ ಪಾದಾರ್ಪಣೆ ವರ್ಷದಲ್ಲಿ ವಿಕೆಟ್ ಹಿಂದೆ ಅತೀ ಹೆಚ್ಚು ಬಳಿ ಪಡೆದ ಬ್ರಾಡ್ ಹ್ಯಾಡಿನ್ ದಾಖಲೆಯನ್ನು ಸರಿದೂಗಿಸಿದರು ( 42)
*ಇಶಾಂತ್ ಶರ್ಮ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 6ನೇ ಬೌಲರ್ ಎಂದೆನಿಸಿದರು( 267) ಇಶಾಂತ್ ಆಸ್ಟ್ರೇಲಿಯಾ ನಾಥನ್ ಲಿಯೋನ್ ವಿಕೆಟ್ ಪಡೆಯುದರೊಂದಿಗೆ ಬಿಷನ್ ಸಿಂಗ್ ಬೇಡಿಯವರ ದಾಖಲೆ ಮುರಿದರು. (ಬೇಡಿ 266)
Advertisement