Advertisement
ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ನಿಕೋಲಸ್ ಪೂರಣ್ ಅವರ ಸಿಡಿಲಬ್ಬರದ ಆಟದ ಹೊರತಾಗಿಯೂ ಪರಿಪೂರ್ಣ ಬ್ಯಾಟಿಂಗ್ ತೋರ್ಪಡಿಸುವಲ್ಲಿ ವಿಫಲವಾಯಿತು. 7 ವಿಕೆಟಿಗೆ 157 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿತು. ಇದರಲ್ಲಿ ಪೂರಣ್ ಪಾಲು 61 ರನ್. ಜವಾಬಿತ್ತ ಭಾರತ 18.5 ಓವರ್‌ಗಳಲ್ಲಿ 4 ವಿಕೆಟಿಗೆ 162 ರನ್ ಬಾರಿಸಿ ಗೆದ್ದು ಬಂದಿತು.
Related Articles
Advertisement
ವಿಂಡೀಸಿಗೆ ಕಡಿವಾಣಮೊದಲು ಬೌಲಿಂಗ್ ಆಯ್ದುಕೊಂಡ ರೋಹಿತ್ ಶರ್ಮ ಅವರ ನಿರ್ಧಾ ರವನ್ನು ಬೌಲರ್‌ಗಳೆಲ್ಲ ಸೇರಿ ಭರ್ಜರಿಯಾಗಿಯೇ ಸಮರ್ಥಿಸಿದರು. ಒಂದು ಓವರ್ ಎಸೆದ ವೆಂಕಟೇಶ್ ಅಯ್ಯರ್ ಹೊರತುಪಡಿಸಿ ಉಳಿದ ಐದೂ ಬೌಲರ್‌ಗಳು ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ ರವಿ ಬಿಷ್ಣೋಯಿ 4 ಓವರ್‌ಗಳಲ್ಲಿ ಕೇವಲ 17 ರನ್ನಿಗೆ 2 ವಿಕೆಟ್ ಉರುಳಿಸಿ ಉತ್ತಮ ಯಶಸ್ಸು ಸಾಧಿಸಿದರು. ಹರ್ಷಲ್ ಪಟೇಲ್ 37ಕ್ಕೆ 2 ವಿಕೆಟ್ ಕಿತ್ತರು. ಬಿಷ್ಣೋಯಿ ಪದಾರ್ಪಣ ಪಂದ್ಯದಲ್ಲೇ 3ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಭಾರತದ ಸ್ಪಿನ್ನರ್ ಎನಿಸಿದರು. ಪ್ರಗ್ಯಾನ್ ಓಜಾ 21ಕ್ಕೆ 4, ಅಕ್ಷರ್ ಪಟೇಲ್ 17ಕ್ಕೆ 3 ವಿಕೆಟ್ ಕೆಡವಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಅರ್ಲಿ ಬ್ರೇಕ್
ಭುವನೇಶ್ವರ್ ಕುಮಾರ್ ಮೊದಲ ಓವರ್‌ನಲ್ಲೇ ಕಿಂಗ್ (4) ವಿಕೆಟ್ ಕಿತ್ತು ಅರ್ಲಿ ಬ್ರೇಕ್ ಒದಗಿಸಿದರು. ಆದರೆ ಕೈಲ್ ಮೇಯರ್ (31) ಮತ್ತು ನಿಕೋಲಸ್ ಪೂರಣ್ (61) ದ್ವಿತೀಯ ವಿಕೆಟಿಗೆ 6 ಓವರ್‌ಗಳಿಂದ 47 ರನ್ ಪೇರಿಸಿ ಆಧರಿಸಿದರು. ಈ ಜೋಡಿಯನ್ನು ಚಹಲ್ ಬೇರ್ಪಡಿಸಿದ ಬಳಿಕ ವಿಂಡೀಸ್ ಓಟ ನಿಯಂತ್ರಣಕ್ಕೆ ಬಂತು. ರೋಸ್ಟನ್ ಚೇಸ್ (4) ಮತ್ತು ಅಪಾಯಕಾರಿ ರೋವ¾ನ್ ಪೊವೆಲ್ (2) ಅವರನ್ನು ಅಗ್ಗಕ್ಕೆ ಉರುಳಿಸಿದ್ದರಿಂದ ಭಾರತ ಹಿಡಿತ ಸಾಧಿಸಿತು. 14 ಓವರ್ ಅಂತ್ಯಕ್ಕೆ 90 ರನ್ನಿಗೆ ಅರ್ಧದಷ್ಟು ಮಂದಿ ಆಟ ಮುಗಿಸಿದರು. ಆದರೆ ಪೂರಣ್ ಮಾತ್ರ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ಇನ್ನಿಂಗ್ಸ್ ಬೆಳೆಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದರು. 18ನೇ ಓವರ್ ತನಕ ಇನ್ನಿಂಗ್ಸ್ ಬೆಳೆಸಿದ ಅವರು 43 ಎಸೆತಗಳಿಂದ 61 ರನ್ ಬಾರಿಸಿದರು. 5 ಪ್ರಚಂಡ ಸಿಕ್ಸರ್ ಮತ್ತು 4 ಬೌಂಡರಿಗಳನ್ನು ಇದು ಒಳಗೊಂಡಿತ್ತು. ನಾಯಕ ಕೈರನ್ ಪೊಲಾರ್ಡ್ 7ರಷ್ಟು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದು ಅಜೇಯ 24 ರನ್ ಮಾಡಿದರು (2 ಬೌಂಡರಿ, 1 ಸಿಕ್ಸರ್). ಸ್ಕೋರ್ ಪಟ್ಟಿ
ವೆಸ್ಟ್ ಇಂಡೀಸ್
ಬ್ರ್ಯಾಂಡನ್ ಕಿಂಗ್ ಸಿ ಸೂರ್ಯಕುಮಾರ್ ಬಿ ಭುವನೇಶ್ವರ್ 4
ಕೈಲ್ ಮೇಯರ್ ಎಲ್‌ಬಿಡಬ್ಲ್ಯು ಚಹಲ್ 31
ನಿಕೋಲಸ್ ಪೂರಣ್ ಸಿ ಕೊಹ್ಲಿ ಬಿ ಹರ್ಷಲ್ 61
ರೋಸ್ಟನ್ ಚೇಸ್ ಎಲ್‌ಬಿಡಬ್ಲ್ಯು ಬಿಷ್ಣೋಯಿ 4
ಪೊವೆಲ್ ಸಿ ಅಯ್ಯರ್ ಬಿ ಬಿಷ್ಣೋಯಿ 2
ಅಖೀಲ್ ಹೊಸೇನ್ ಸಿ ಮತ್ತು ಬಿ ಚಹರ್ 10
ಕೈರನ್ ಪೊಲಾರ್ಡ್ ಔಟಾಗದೆ 24
ಓಡಿನ್ ಸ್ಮಿತ್ ಸಿ ರೋಹಿತ್ ಬಿ ಹರ್ಷಲ್ 4
ಇತರ 17
ಒಟ್ಟು (7 ವಿಕೆಟಿಗೆ) 157
ವಿಕೆಟ್ ಪತನ:1-4, 2-51, 3-72, 4-74, 5-90, 6-135, 7-157.
ಬೌಲಿಂಗ್;
ಭುವನೇಶ್ವರ್ ಕುಮಾರ್ 4-0-31-1
ದೀಪಕ್ ಚಹರ್ 3-0-28-1
ಹರ್ಷಲ್ ಪಟೇಲ್ 4-0-37-2
ಯಜುವೇಂದ್ರ ಚಹಲ್ 4-0-34-1
ರವಿ ಬಿಷ್ಣೊಯಿ 4-0-17-2
ವೆಂಕಟೇಶ್ ಅಯ್ಯರ್ 1-0-4-0
ಭಾರತ
ರೋಹಿತ್ ಶರ್ಮ ಸಿ ಸ್ಮಿತ್ ಬಿ ಚೇಸ್ 40
ಇಶಾನ್ ಕಿಶನ್ ಸಿ ಅಲೆನ್ ಬಿ ಚೇಸ್ 35
ವಿರಾಟ್ ಕೊಹ್ಲಿ ಸಿ ಪೊಲಾರ್ಡ್ ಬಿ ಅಲೆನ್ 17
ರಿಷಭ್ ಪಂತ್ ಸಿ ಸ್ಮಿತ್ ಬಿ ಕಾಟ್ರೆಲ್ 8
ಸೂರ್ಯಕುಮಾರ್ ಔಟಾಗದೆ 34
ವೆಂಕಟೇಶ್ ಅಯ್ಯರ್ ಔಟಾಗದೆ 24
ಇತರ 4
ಒಟ್ಟು (18.5 ಓವರ್‌ಗಳಲ್ಲಿ 4 ವಿಕೆಟಿಗೆ) 162
ವಿಕೆಟ್ ಪತನ: 1-64, 2-93, 3-95, 4-114.
ಬೌಲಿಂಗ್;
ಶೆಲ್ಡನ್ ಕಾಟ್ರೆಲ್ 4-0-35-1
ರೊಮಾರಿಯೊ ಶೆಫರ್ಡ್ 3-0-24-0
ಓಡಿನ್ ಸ್ಮಿತ್ 2-0-31-0
ಅಖೀಲ್ ಹೊಸೇನ್ 4-0-34-0
ರೋಸ್ಟನ್ ಚೇಸ್ 4-0-14-2
ಫ್ಯಾಬಿಯನ್ ಅಲೆನ್ 1.5-0-23-1