Advertisement

ಧೋನಿ ಆಕ್ರಮಣಕಾರಿ ಆಟಕ್ಕೆ ಸ್ವಾತಂತ್ರ್ಯ ನೀಡಬೇಕು: ಭಜ್ಜಿ

09:03 AM May 19, 2019 | keerthan |

ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ಅವರಲ್ಲಿ ಈಗಲೂ ಸಿಕ್ಸ್‌-ಹಿಟ್ಟಿಂಗ್‌ ಪವರ್‌ ಇದೆ. ಹೀಗಾಗಿ ವಿಶ್ವಕಪ್‌ ವೇಳೆ ಆಕ್ರಮಣಕಾರಿ ಆಟವಾಡಲು ಅವರಿಗೆ ಆಡಳಿತ ಮಂಡಳಿ ಸ್ವಾತಂತ್ರ್ಯ ನೀಡಬೇಕು ಎಂದು ಹರ್ಭಜನ್‌ ಸಿಂಗ್‌ ಹೇಳಿದ್ದಾರೆ.

Advertisement

“ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿದಾಗಲೆಲ್ಲ ಧೋನಿ ಉತ್ತಮ ಪ್ರದರ್ಶನ ನೀಡುವುದನ್ನು ನಾವು ಕಂಡಿದ್ದೇವೆ. ಇದೇ ರೀತಿಯ ಬ್ಯಾಟಿಂಗ್‌ ನಡೆಸಲು ಅವರಿಗೆ ತಂಡದ ಆಡಳಿತ ಮಂಡಳಿ ಅನುಮತಿ ನೀಡಬೇಕು. ಹಾರ್ದಿಕ್‌ ಪಾಂಡ್ಯ ಅವರ ಬಿರುಸಿನ ಆಟಕ್ಕೂ ನಿರ್ಬಂಧ ವಿಧಿಸಬಾರದು’ ಎಂದು ಹರ್ಭಜನ್‌ ಸಲಹೆ ಮಾಡಿದರು.

ಅಗ್ರ ಕ್ರಮಾಂಕದಲ್ಲಿ ಧವನ್‌, ರೋಹಿತ್‌, ಕೊಹ್ಲಿ ಮತ್ತು ರಾಹುಲ್‌ ಇನ್ನಿಂಗ್ಸ್‌ ಕಟ್ಟಬಲ್ಲರು. ಹೀಗಾಗಿ ಧೋನಿಗೆ ಆಕ್ರಮಣಕಾರಿಯಾಗಿ ಆಡಲು ಪೂರ್ತಿ ಸ್ವಾತಂತ್ರ್ಯ ನೀಡುವುದು ಉತ್ತಮ ಎಂದು ಹರ್ಭಜನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next