Advertisement

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

09:48 AM Apr 28, 2024 | Team Udayavani |

ಹೊಸದಿಲ್ಲಿ: ಮುಂಬರುವ ಟಿ20 ವಿಶ್ವಕಪ್ ಗೆ ತಂಡ ಪ್ರಕಟಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಚುಟುಕು ವಿಶ್ವಕಪ್ ಸಮರಕ್ಕೆ ಭಾರತ ತಂಡದಲ್ಲಿ ಯಾರು ಯಾರು ಇರಲಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ.

Advertisement

ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಇಂದು ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ತಂಡದ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕಾಗಿ ರೋಹಿತ್ ದೆಹಲಿಯಲ್ಲಿದ್ದು, ಅಗರ್ಕರ್ ಕೂಡಾ ದೆಹಲಿಗೆ ತೆರಳಲಿದ್ದಾರೆ.

ಆಯ್ಕೆ ಸಮಿತಿಯ ಇತರರೊಂದಿಗೆ ಚರ್ಚೆ ನಡೆಸುವ ಮೊದಲು ನಾಯಕನ ಬಳಿ ಅಗರ್ಕರ್ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಆರಂಭಿಕ ಆಟಗಾರನ ಸ್ಥಾನ, ವಿಕೆಟ್ ಕೀಪರ್ ಮತ್ತು ಆಲ್ ರೌಂಡರ್ ಕುರಿತು ಹೆಚ್ಚಿನ ಚರ್ಚೆಗಳಾಗಲಿದೆ. ಟಿ20 ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಬಗ್ಗೆ ಆತಂಕಗಳಿದ್ದು, ಅದೂ ಕೂಡಾ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಜೂನ್ 1ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವ ಕಪ್ ನಡೆಯಲಿದೆ. ಮೇ 1ರ ಮೊದಲು ಭಾಗವಹಿಸುವ ಎಲ್ಲಾ ದೇಶಗಳು ತಂಡವನ್ನು ಪ್ರಕಟಿಸಬೇಕಿದೆ. ಟೀಂ ಇಂಡಿಯಾದ ಘೋಷಣೆಯು ಮೇ 1ರಂದು ಮುಂಬೈನಲ್ಲಿ ಆಗುವ ಸಾಧ್ಯತೆ ಹೆಚ್ಚಿದೆ.

Advertisement

ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದು, ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್ ಪಟೇಲ್ ಅಥವಾ ರವಿ ಬಿಷ್ಣೋಯಿ ಆಯ್ಕೆಯಾಗುವ ಸಾಧ್ಯತೆಯಿದೆ.

ದೇಶದ ಅತ್ಯಂತ ಕೌಶಲ್ಯಪೂರ್ಣ ವೈಟ್ ಬಾಲ್ ರಿಸ್ಟ್ ಸ್ಪಿನ್ನರ್ ಯುಜಿ ಚಾಹಲ್ ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕೋಚಿಂಗ್ ಸ್ಟಾಫ್‌ ನ ಪ್ರಭಾವಿ ಸದಸ್ಯರಿಗೆ ಚಾಹಲ್ ಆದ್ಯತೆಯ ಆಯ್ಕೆಯಾಗಿಲ್ಲ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next