ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಖುಷಿಯಲ್ಲಿರುವ ವಿರಾಟ್ ಕೊಹ್ಲಿ ಪಡೆ 2022ನೇ ಇಸವಿಯನ್ನು ಇದೇ ಖುಷಿಯಲ್ಲಿ ಸ್ವಾಗತಿಸಿದೆ. ಟೀಮ್ ಹೊಟೇಲ್‌ನಲ್ಲಿ ವಿಶೇಷ ಸಂಭ್ರಮಾಚರಣೆ ನಡೆಸಿದೆ.
ಕ್ರಿಕೆಟಿಗರೊಂದಿಗೆ ಕೋಚ್ ರಾಹುಲ್ ದ್ರಾವಿಡ್, ಸಹಾಯಕ ಸಿಬಂದಿಯೆಲ್ಲ ಒಟ್ಟುಗೂಡಿ ಡಿನ್ನರ್ ಪಾರ್ಟಿ ಮೂಲಕ ಹೊಸ ವರ್ಷದ ಆಚರಣೆ ನಡೆಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಜತೆ ಕಾಣಿಸಿಕೊಂಡರು.
ಇಲ್ಲಿನ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಕೆಲವು ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬುಲ್ಸ್-ಟೈಟಾನ್ಸ್, ಮುಂಬಾ-ಯೋಧ ಟೈ ರೋಮಾಂಚನ
“ಹೊಸ ವರ್ಷದಲ್ಲಿ ಎಲ್ಲರ ಜೀವನ ಸಂಭ್ರಮ ಹಾಗೂ ಸಂತಸದಿಂದ ಕೂಡಿರಲಿ. ನಮ್ಮ ಕಡೆಯಿಂದ ಪ್ರೀತಿಯ ಸಂದೇಶ..’ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
“ಈ ವರ್ಷ ನಾವು ದೊಡ್ಡ ಸಂಭ್ರಮ ಆಚರಿಸಿದ್ದೇವೆ. 2021ಕ್ಕೆ ಹೃದಯಾಂತರಾಳದ ವಿದಾಯ’ ಎಂಬುದು ಅನುಷ್ಕಾ ಶರ್ಮ ಟ್ವೀಟ್. ಕಳೆದ ಜನವರಿಯಲ್ಲಿ ತಮಗೆ ಹೆಣ್ಣು ಮಗುವಾಗಿದ್ದನ್ನು ಅವರಿಲ್ಲಿ ಉಲ್ಲೇಖಿಸಿದ್ದಾರೆ.