ಕಾನ್ಪುರ: ಆರಂಭಿಕ ಬ್ಯಾಟಿಂಗ್ ಆಘಾತದಿಂದ ಚೇತರಿಸಿಕೊಂಡ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆ ಉತ್ತಮ ಗುರಿ ನೀಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಡಿಕ್ಲೇರ್ ಮಾಡಿಕೊಂಡಿದ್ದು, ಕಿವೀಸ್ ಗೆ 284 ರನ್ ಗುರಿ ನೀಡಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಏಳು ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ ಡಿಕ್ಲೇರ್ ನೀಡಿತು. ಇನ್ನೂ ಒಂದು ದಿನದ ಆಟ ಬಾಕಿಯಿದ್ದು, ಕಿವೀಸ್ ಗೆಲುವು ಸಾಧಿಸಲು 284 ರನ್ ಗಳಿಸಬೇಕಿದೆ.
ಸತತ ವಿಕೆಟ್ ಕಳೆದುಕೊಂಡ ಭಾರತ ತಂಡ ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. 51 ರನ್ ಗೆ ಐದು ಮಂದಿ ಬ್ಯಾಟರ್ ಗಳು ಪೆವಿಲಿಯನ್ ಸೇರಿದ್ದರು. ಆದರೆ ಅಶ್ವಿನ್ ಮತ್ತು ಸಾಹಾ ಜೊತೆ ತಲಾ ಅರ್ಧಶತಕದ ಜೊತೆಯಾಟವಾಡಿದ ಶ್ರೇಯಸ್ ಅಯ್ಯರ್ ಕುಸಿತದಿಂದ ಪಾರು ಮಾಡಿದರು. ಅಯ್ಯರ 65 ರನ್ ಗಳಿಸಿದರೆ, ಅಶ್ವಿನ್ ಉಪಯುಕ್ತ 32 ರನ್ ಗಳಿಸಿದರು.
ಇದನ್ನೂ ಓದಿ:ಚೊಚ್ಚಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಶ್ರೇಯಸ್ ಅಯ್ಯರ್
ಕೊನೆಯಲ್ಲಿ ಅಕ್ಷರ್ ಪಟೇಲ್ ಜೊತೆ ಕೀಪರ್ ಸಾಹಾ ಉಪಯುಕ್ತ ಜೊತೆಯಾಟವಾಡಿದರ. ಸಾಹಾ ಅಜೇಯ 61 ರನ್ ಗಳಿಸಿದರೆ, ಅಕ್ಷರ್ ಅಜೇಯ 28 ರನ್ ಗಳಿಸಿದರು. ಕಿವೀಸ್ ಪರ ಸೌಥಿ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಕಿತ್ತರು.