Advertisement
ಈ ಸಂದರ್ಭದಲ್ಲಿ ಕೊಹ್ಲಿ ಧ್ವಜಾರೋಹಣ ಮಾಡಿದರು. ಕ್ರಿಕೆಟಿಗರೆಲ್ಲ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡಿದರು. ತಂಡದ ಸಹಾಯಕ ಸಿಬಂದಿಗಳು, ಕೆಲವು ಆಟಗಾರರ ಕುಟುಂಬದ ಸದಸ್ಯರೂ ಈ ಸಮಾ ರಂಭಕ್ಕೆ ಸಾಕ್ಷಿಯಾದರು. ಭಾರತೀಯ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಚಿತ್ರ ಸಹಿತ ಪ್ರಕಟಿ ಸಿದೆ. ಇದರ ವೀಡಿಯೋವನ್ನು “ಡಬ್ಲ್ಯುಡಬ್ಲ್ಯುಡಬ್ಲ್ಯು.ಬಿಸಿಸಿಐ.ಟಿವಿ’ಯಲ್ಲಿ ವೀಕ್ಷಿಸಬಹುದು.
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಪಲ್ಲೆಕಿಲೆ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆಲ್ಲುವುದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ವಿದೇಶಗಳಲ್ಲಿ ಅತ್ಯಧಿಕ ಟೆಸ್ಟ್ ಪಂದ್ಯಗಳನ್ನು ಗೆದ್ದ ದ್ವಿತೀಯ ಭಾರತೀಯ ನಾಯಕನೆನಿಸಿದ್ದಾರೆ.
Related Articles
Advertisement
ಟೆಸ್ಟ್ ಸರಣಿ: ವೈಟ್‌ವಾಶ್ ಕಥನಈವರೆಗೆ 3 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪಂದ್ಯಗಳ ಸರಣಿಯಲ್ಲಿ 57 ಕ್ಲೀನ್‌ಸ್ವೀಪ್ ಫಲಿತಾಂಶ ದಾಖಲಾಗಿದೆ. ಇವುಗಳಲ್ಲಿ ಆಗ್ರಸ್ಥಾನದಲ್ಲಿರುವ ತಂಡ ಆಸ್ಟ್ರೇಲಿಯ. ಕಾಂಗರೂ ಪಡೆ ಸರ್ವಾಧಿಕ 22 ಸರಣಿಗಳನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ಇಂಗ್ಲೆಂಡ್ (13), ಪಾಕಿಸ್ಥಾನ (5), ಭಾರತ (5), ದಕ್ಷಿಣ ಆಫ್ರಿಕಾ, ಶ್ರೀಲಂಕಾ (ತಲಾ 4), ವೆಸ್ಟ್ ಇಂಡೀಸ್ (3) ಮತ್ತು ಬಾಂಗ್ಲಾದೇಶ (1). ಟೆಸ್ಟ್ ಇತಿಹಾದಲ್ಲಿ ಮೊದಲ ಕ್ಲೀನ್‌ಸ್ವೀಪ್ ಸಾಹಸಕ್ಕೆ ನಿದರ್ಶನವಾದ ತಂಡ ಇಂಗ್ಲೆಂಡ್. ಅದು 1886ರ ತವರಿನ ಸರಣಿಯಲ್ಲಿ ಆಸ್ಟ್ರೇಲಿಯಕ್ಕೆ 3-0 ಸೋಲುಣಿಸಿತ್ತು. ಈವರೆಗೆ ಯಾವುದೇ ತಂಡಗಳು 6 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿಲ್ಲ. ಆದರೆ 5 ಪಂದ್ಯಗಳ 10 ಸರಣಿಗಳಲ್ಲಿ ಬೇರೆ ಬೇರೆ ತಂಡಗಳು ಕ್ಲೀನ್‌ಸ್ವೀಪ್ ಸಾಧನೆಗೈದಿವೆ. ಇವುಗಳಲ್ಲಿ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ (5). ಭಾರತ ಈವರೆಗಿನ ಮೊದಲ 4 ಸರಣಿ ಗೆಲುವುಗಳನ್ನು ತವರಿನಲ್ಲೇ ಒಲಿಸಿಕೊಂಡಿದೆ. ಇವುಗಳೆಂದರೆ 1993ರಲ್ಲಿ ಇಂಗ್ಲೆಂಡ್ ವಿರುದ್ಧ 3-0, 1994ರಲ್ಲಿ ಶ್ರೀಲಂಕಾ ವಿರುದ್ಧ 3-0, 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 4-0 ಹಾಗೂ ಕಳೆದ ವರ್ಷ ನ್ಯೂಜಿಲ್ಯಾಂಡ್ ವಿರುದ್ಧ 3-0 ಸರಣಿ ಗೆಲುವು. ಶ್ರೀಲಂಕಾವನ್ನು 3-0 ಅಂತರದಿಂದ ಮಣಿಸುವ ಮೂಲಕ ವಿದೇಶದಲ್ಲೂ ಕ್ಲೀನ್‌ಸ್ವೀಪ್ ಖಾತೆ ತೆರೆಯಿತು. ಅಜರುದ್ದೀನ್ ಮತ್ತು ವಿರಾಟ್ ಕೊಹ್ಲಿ ಅತೀ ಹೆಚ್ಚು 2 ಸಲ ಕ್ಲೀನ್‌ಸ್ವೀಪ್ ಸರಣಿಗೆ ಸಾಕ್ಷಿಯಾದ ಭಾರತದ ನಾಯಕರಾಗಿದ್ದಾರೆ. 1993ರ ಇಂಗ್ಲೆಂಡ್ ವಿರುದ್ಧದ 3-0 ಹಾಗೂ 1994ರ ಶ್ರೀಲಂಕಾ ವಿರುದ್ಧದ 3-0 ಗೆಲುವು ಅಜರ್ ನಾಯಕತ್ವದಲ್ಲೇ ಒಲಿದಿತ್ತು. 2016ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 3-0 ಗೆಲುವಿನ ವೇಳೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು.