ಮುಂಬೈ: ಮೊನ್ನೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಿಂದ ವೆಸ್ಟ್ ಇಂಡೀಸ್ ನ ಪೋರ್ಟ್ ಆಫ್ ಸ್ಪೇನ್‌ಗೆ ಭಾರತೀಯ ಕ್ರಿಕೆಟ್ ತಂಡ ಪ್ರಯಾಣ ಮಾಡಿತು. ಈ ಒಂದೇ ಒಂದು ವಿಶೇಷ ವಿಮಾನದ ಟಿಕೆಟ್ ವೆಚ್ಚ 3.5 ಕೋಟಿ ರೂ.!
ಇದಕ್ಕೆ ಕಾರಣವೇನು ಗೊತ್ತಾ? 16 ಕ್ರಿಕೆಟಿಗರು, ಅವರ ಪತ್ನಿಯರು, ತಂಡದ ಸಹಾಯಕ ಸಿಬ್ಬಂದಿ ಇವರೆಲ್ಲರನ್ನೂ ವಿಶೇಷ ವಿಮಾನದಲ್ಲಿ ಕಳಿಸಿದ್ದು.
ಮಾಮೂಲಿ ವಿಮಾನಗಳಲ್ಲಿ ಎಲ್ಲರನ್ನೂ ಒಂದೇ ಬಾರಿಗೆ ಕಳಿಸಲು ಸಾಧ್ಯವಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ಕಳಿಸಿದರೆ ಬೇರೆಬೇರೆ ರೀತಿಯ ಸಮಸ್ಯೆಗಳಾಗುತ್ತವೆ. ಅದಕ್ಕಾಗಿ ವಿಶೇಷ ವಿಮಾನಗಳನ್ನು ಬಿಸಿಸಿಐ ಬುಕ್ ಮಾಡಿತು. ಹಾಗಾಗಿ ಖರ್ಚು 3.5 ಕೋಟಿ ರೂ.ಗೇರಿತು.
ಇದನ್ನೂ ಓದಿ: ತುಳುವಿನ “ಜೀಟಿಗೆ’ಗೆ ರಾಷ್ಟ್ರ ಪ್ರಶಸ್ತಿ ಗೌರವ
ಸದ್ಯ ಕೊರೊನಾ ಇರುವುದರಿಂದ ಪ್ರತ್ಯೇಕಪ್ರತ್ಯೇಕವಾಗಿ ಕಳಿಸುವುದೂ ಕಷ್ಟವೇ. ಹಾಗಂತ ಕೊರೊನಾ ಏನು ಈ ರೀತಿಯ ವಿಶೇಷ ವಿಮಾನ ಬುಕ್ ಮಾಡಲಿಕ್ಕೆ ಕಾರಣವಲ್ಲ. ಈ ಹಿಂದೆ ಬಿಸಿಸಿಐ ಆಟಗಾರರಿಗೆ ಇತರೆ ಪ್ರಯಾಣಿಕರೊಂದಿಗೆ ವಾಣಿಜ್ಯ ಆಸನಗಳನ್ನೇ ಕಾಯ್ದಿರಿಸುತ್ತಿತ್ತು. ಪತ್ನಿಯರನ್ನೂ ಅಂತಹದ್ದೇ ವಿಮಾನಗಳಲ್ಲಿ ಕಳಿಸುತ್ತಿತ್ತು. ಕೊರೊನಾ ಬಂದ ನಂತರ ಪ್ರತ್ಯೇಕ ವಿಮಾನ ಕಾಯ್ದಿರಿಸುವ ವ್ಯವಸ್ಥೆ ಆರಂಭಿಸಿದೆ.