Advertisement
ಏಕದಿನದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇ ಲಿಯಕ್ಕೆ 4-1 ಸೋಲಿನೇಟು ನೀಡಿದ ಭಾರತವೀಗ ಇದೇ ಆತ್ಮವಿಶ್ವಾಸದಲ್ಲಿ ಚುಟುಕು ಕ್ರಿಕೆಟ್ ಸರಣಿಯಲ್ಲೂ ಕಾಂಗರೂ ಪಡೆಯನ್ನು ಉರುಳಿಸುವ ಯೋಜನೆಯಲ್ಲಿದೆ. ಏಕದಿನದ ಸರಣಿ ಗೆಲುವು ಭಾರತವನ್ನು ಐಸಿಸಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿಸಿತ್ತು. ಟಿ-20 ಯಶಸ್ಸು ಟೀಮ್ ಇಂಡಿಯಾವನ್ನು ಗರಿಷ್ಠ ದ್ವಿತೀಯ ಸ್ಥಾನಕ್ಕೆ ಕೊಂಡೊಯ್ಯಲಿದೆ. ಆದರೆ ಇದಕ್ಕೆ 3-0 ಕ್ಲೀನ್‌ಸ್ವೀಪ್ ಸಾಹಸ ಅಗತ್ಯ.
Related Articles
Advertisement
ಅವಳಿ ಸ್ಪಿನ್ನರ್‌ಗಳಾದ ಅಶ್ವಿನ್, ಜಡೇಜ ಗೈರಲ್ಲೂ ಭಾರತ ಚುಟುಕು ಕ್ರಿಕೆಟಿಗೆ ಅಗತ್ಯವಿರುವ ಸಮರ್ಥ ಪಡೆಯನ್ನೇ ಹೊಂದಿದೆ. 38ರ ಹರೆಯದ ಆಶಿಷ್ ನೆಹ್ರಾ ಆಯ್ಕೆ ಅಚ್ಚರಿಯಾಗಿ ಕಂಡರೂ ಅವರ ಡೆತ್ ಓವರ್ ಸಾಮರ್ಥ್ಯದ ಬಗ್ಗೆ ಈಗಲೂ ವಿಶ್ವಾಸ ಇಡಬಹುದಾಗಿದೆ. ಇವರಿಗೆ ಭುವನೇಶ್ವರ್, ಬುಮ್ರಾ ತಕ್ಕ ಜತೆಗಾರರಾಗಿ ಗೋಚರಿಸುತ್ತಾರೆ. ಸ್ಪಿನ್ನಿಗೆ ಕುಲದೀಪ್, ಚಾಹಲ್, ಪಟೇಲ್, ಜಾಧವ್ ಇದ್ದಾರೆ. ಏಕದಿನ ಸರಣಿಶ್ರೇಷ್ಠ ಪಾಂಡ್ಯ ಇಲ್ಲಿಯೂ ಸುಂಟರಗಾಳಿಯಾಗುವುದು ಖಂಡಿತ.
ಧವನ್ ಮರಳಿದ್ದರಿಂದ ಬ್ಯಾಟಿಂಗ್ ವಿಭಾಗ ಹೆಚ್ಚು ಬಲಿಷ್ಠವಾಗಿದೆ. ರೋಹಿತ್, ಕೊಹ್ಲಿ, ಪಾಂಡೆ, ಧೋನಿ, ಜಾಧವ್, ಕಾರ್ತಿಕ್ ಅವರಿಂದ ಉತ್ತಮ ಆಟವನ್ನು ನಿರೀಕ್ಷಿಸಲಾಗಿದೆ. ಅಂದಹಾಗೆ ಭಾರತ ಕೊನೆಯ ಸಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಸೋತದ್ದು 2012ರ ವಿಶ್ವಕಪ್‌ನಲ್ಲಿ!
ಆಸೀಸ್ ಹೋರಾಟ ನಿರೀಕ್ಷೆ: ವಾರ್ನರ್, ಫಿಂಚ್, ಸ್ಮಿತ್, ಹೆಡ್ ಆಸ್ಟ್ರೇಲಿಯದ ಬ್ಯಾಟಿಂಗ್ ಹೀರೋಗಳು. ಏಕದಿನದಲ್ಲಿ ಮಿಂಚಿದ ಸ್ಟೊಯಿನಿಸ್ ಇಲ್ಲಿಲ್ಲ. ಫಾಕ್ನರ್ ಅವರನ್ನೂ ಮನೆಗೆ ಕಳಿಸಲಾಗಿದೆ. ಬದಲು ಆಲ್‌ರೌಂಡರ್‌ಗಳಾದ ಹೆನ್ರಿಕ್ಸ್, ಕ್ರಿಸ್ಟಿಯನ್ ಸೇರ್ಪಡೆಗೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್ ಬಗ್ಗೆ ಅನುಮಾನವಿದೆ. ಎಡಗೈ ವೇಗಿ ಬೆಹೆಡಾಫ್ì ಪಾದಾರ್ಪಣೆಯ ಕ್ಷಣಗಣನೆಯಲ್ಲಿದ್ದಾರೆ. ಕೋಲ್ಟರ್ ನೈಲ್, ಕಮಿನ್ಸ್, ಝಂಪ, ರಿಚರ್ಡ್‌ಸನ್ ಬೌಲಿಂಗ್ ಕೈಚಳಕ ತೋರಬೇಕಾದ ಅಗತ್ಯವಿದೆ. ಆಗಷ್ಟೇ ನಿಜವಾದ ಟಿ-20 ಜೋಶ್ ನಿರೀಕ್ಷಿಸಲು ಸಾಧ್ಯ.