Advertisement

‘ಹಿರಣ್ಯ’ ನಾಯಕಿಗೆ ಪೋಸ್ಟರ್ ಗಿಫ್ಟ್

04:19 PM Jun 06, 2023 | Team Udayavani |

ರಾಜವರ್ಧನ್‌ ನಟನೆಯಲ್ಲಿ ಹಿರಣ್ಯ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ಯುವ ನಟಿ ರಿಹಾನಾ ನಾಯಕಿಯಾಗಿ ನಟಿಸಿದ್ದಾರೆ.

Advertisement

ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ರಿಹಾನಾಗೆ ಚಿತ್ರತಂಡ ಹೊಸ ಪೋಸ್ಟರ್‌ ಮೂಲಕ ಗಿಫ್ಟ್ ನೀಡಿದೆ. ಈ ಪೋಸ್ಟರ್‌ನಲ್ಲಿ ರಿಹಾನಾ ಏನನ್ನು ಕಳೆದುಕೊಂಡಂತೆ ಭಾವುಕಳಾಗಿ ನಿಂತಿದ್ದಾರೆ.

ಅಂದಹಾಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಿಹಾನಾ ಅವರನ್ನು ಆಡಿಷನ್‌ ಮೂಲಕವೇ ಆಯ್ಕೆ ಮಾಡಲಾಗಿದೆ. ಹಿರಣ್ಯದಲ್ಲಿ ಇವರದ್ದು ಪವರ್‌ ಫುಲ್‌ ಪಾತ್ರ. ಸಿನಿಮಾ ಪೂರ್ತಿ ಅಭಿನಯ ಭಾವನಾತ್ಮಕವಾಗಿಯೇ ಸಾಗುತ್ತದೆಯಂತೆ.

ಈ ಚಿತ್ರವನ್ನು ಪ್ರವೀಣ್‌ ಅವ್ರುಕ್ತ ನಿರ್ದೇಶಿಸಿದ್ದಾರೆ. ಈಗಾಗಲೇ ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಪರಿಚಯವಾಗುತ್ತಿದ್ದಾರೆ. ಬಿಗ್‌ ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದರ್, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next