Advertisement

BJP ಎ ಟೀಂ ನಮ್ಮದೇ, ಬಿಎಸ್‌ವೈ,ರಾಘವೇಂದ್ರ ಬಿ ಟೀಂ: ಈಶ್ವರಪ್ಪ

12:31 AM Apr 14, 2024 | Team Udayavani |

ಶಿವಮೊಗ್ಗ: ಶಿವಮೊಗ್ಗದಲ್ಲಿರುವ ಬಿಜೆಪಿ “ಎ’ ಟೀಂ ನಮ್ಮದೇ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಮಧು ಬಂಗಾರಪ್ಪ ಅವರು ನಮ್ಮದು ಬಿಜೆಪಿ “ಬಿ’ ಟೀಂ ಎಂದು ಹೇಳಿದ್ದಾರೆ. ನಾನು ಸಾಯುವವರೆಗೆ ಬಿಜೆಪಿಯ “ಎ’ ಟೀಂ ಆಗಿರುತ್ತೇನೆ. ನಮ್ಮದೇ ಒರಿಜಿನಲ್‌ ಬಿಜೆಪಿ ಟೀಂ. ರಾಘವೇಂದ್ರ ಅವರದೇ “ಬಿ’ ಟೀಂ. ಈ ಸಂಗತಿ ಮಧು ಬಂಗಾರಪ್ಪಗೆ ಗೊತ್ತಾಗಿಲ್ಲ ಅಷ್ಟೇ. ಮಧು ಬಂಗಾರಪ್ಪ ಹಲವು ಪಕ್ಷಗಳಿಗೆ ಹೋಗಿಬಂದವರು. ಯಡಿಯೂರಪ್ಪ ಕೂಡ ಬಿಜೆಪಿ ಬಿಟ್ಟು ಹೋಗಿ ಮತ್ತೆ ಬಂದವರು. ನಾನು ನಿಷ್ಠಾವಂತ ಬಿಜೆಪಿಗ. ನನ್ನೊಂದಿಗೆ ಶೇ.60 ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next